ಯಾದಗಿರಿ: ಭೀಮಾನದಿ ಪ್ರವಾಹಕ್ಕೆ ಯುವಕರಿಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಮೃತ ಯುವಕರ ಶವ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. SDRF ತಂಡದಿಂದ ಶವ ಪತ್ತೆ ಕಾರ್ಯಾಚರಣೆ ನಡೆದಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದ ಭೀಮಾನದಿಯಲ್ಲಿ ಶೋಧಕಾರ್ಯ ನಡೆದಿದೆ.
ದನಕ್ಕೆ ನೀರು ಕುಡಿಸಲು ಹೋಗಿದ್ದ ಸಂದರ್ಭದಲ್ಲಿ ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ. ರಮೇಶ್ (17), ಸಿದ್ದಪ್ಪ (21) ಸಾವನ್ನಪ್ಪಿದ ದುರ್ದೈವಿಗಳು. ಶುಕ್ರವಾರ ಬೆಳಗ್ಗೆಯಿಂದ ನಿರಂತರವಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ನುರಿತ ಮೀನುಗಾರರು, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ. ಇದೀಗ ಎಸ್ ಡಿಆರ್ ಎಫ್ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಭೀಮಾನ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದಾಗಿ ಕಾರ್ಯಾಚರಣೆಗೆ ತಡೆಯಾಗುತ್ತಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.