ನಮ್ಮ ಮೆಟ್ರೋ ನಿಯಮ ಪ್ರಕಾರ ಮೆಟ್ರೋ ಒಳಗೆ ಆಹಾರ, ಪಾನೀಯ ಸೇವಿಸುವುದನ್ನು ನಿಷೇಧಿಸಲಾಗಿದೆ. ಆದರೆ, ನಿಯಮ ಉಲ್ಲಂಘಿಸಿ ತಿಂಡಿ ತಿಂದ ತಪ್ಪಿಗಾಗಿ ಯುವತಿಯೊಬ್ಬಳು 500 ರೂ. ದಂಡ ಕಟ್ಟಿದ್ದಾಳೆ.
ಮಾಧವರದಿಂದ ಮಾಗಡಿ ರಸ್ತೆ ಮೆಟ್ರೋ ಮಾರ್ಗದಲ್ಲಿ ಘಟನೆ ನಡೆದಿದೆ. ಏ. 26 ರಂದು ಮೆಟ್ರೋದಲ್ಲಿ ಯುವತಿ ಊಟ ಮಾಡಿದ್ದಳು. ಇಂದು ಬೆಳಗ್ಗೆ ಯುವತಿಗೆ ಭದ್ರತಾ ಸಿಬ್ಬಂದಿ ದಂಡ ವಿಧಿಸಿದ್ದಾರೆ.