ಕೊಪ್ಪಳ: ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಬಿಜೆಪಿಗೆ ಬರುತ್ತಾರ ಎಂಬ ಪ್ರಶ್ನೆ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಗಣೇಶ ಉತ್ಸವ ಅಂಗವಾಗಿ ಬಸನಗೌಡ ಪಾಟೀಲ್ ಯತ್ನಾಳಗಾಗಿ ಆಯೋಜಿಸಿದ್ದ ದಿಕ್ಸೂಚಿ ಭಾಷಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿರುವುದು ಕಂಡು ಬಂದಿದೆ.
ಬಸನಗೌಡ ಪಾಟೀಲ್ ಯತ್ನಾಳ ದಿಕ್ಸೂಚಿ ಭಾಷಣದ ವೇಳೆ ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮತ್ತು ಮಾಜಿ ಸಂಸದ ಶಿವರಾಮಗೌಡ ಹಾಗೂ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ, ಜನಾರ್ದನರೆಡ್ಡಿ ಆಪ್ತ ಸಿಂಗನಾಳ ವಿರೂಪಾಕ್ಷ ಸಹ ಅಕ್ಕಪಕ್ಕದಲ್ಲಿ ನಿಂತು ಸಾಥ್ ನೀಡಿದ್ದಾರೆ.
ಯತ್ನಾಳ ಅದ್ದೂರಿ ಸ್ವಾಗತದಲ್ಲಿ ಬಿಜೆಪಿಯ ನಗರಸಭೆ ಸದಸ್ಯರು ಕಾಣಿಸಿಕೊಂಡು ಯತ್ನಾಳ ಶಕ್ತಿ ಪ್ರದರ್ಶನಕ್ಕೆ ಬೆಂಬಲ ನೀಡಿದ್ದಾರೆ. ಈ ದಿಕ್ಸೂಚಿ ಭಾಷಣದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.