ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಹೊಸ ನಿರ್ಮಾಪಕರ ಪ್ರವೇಶವಾಗುತ್ತಿದೆ.
ಹೌದು! ಅದು ಬೇರಾರೂ ಅಲ್ಲ. ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್ ಕುಮಾರ್. ಪುಷ್ಪಾ ಅರುಣ್ ಕುಮಾರ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಲಾಗಿದೆ. ಹೊಸ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗುವ ಸಾಧ್ಯತೆಗಳಿವೆ.
ಈಗಾಗಲೇ ಪುತ್ರ ರಾಕಿಂಗ್ ಸ್ಟಾರ್ ಯಶ್, ಮಾನ್ಸ್ಟರ್ ಮೈಂಡ್ಸ್ ಕ್ರಿಯೇಷನ್ ಹೆಸರಲ್ಲಿ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇದರ ಬೆನ್ನಲ್ಲೇ ಈಗ ಅವರ ತಾಯಿಯೂ ತಮ್ಮದೇ ಬ್ಯಾನರ್ ಆರಂಭಿಸಿದ್ದು, ಯುವ ಮತ್ತು ಹೊಸ ನಿರ್ದೇಷಶಕರು ಮತ್ತು ನಟರಿಗೆ ಅವಕಾಶ ನೀಡುವ ಪ್ಲ್ಯಾನ್ ಮಾಡಿದ್ದಾರೆ.
ನಾಳೆ 11 ಗಂಟೆಗೆ ಯಶ್ ತಾಯಿ ಪುಷ್ಪಾ ಅವರ ಪಿಎ ಪ್ರೊಡೆಕ್ಷನ್ಸ್ ಕಾರ್ಯಾರಂಭ ಮಾಡಲಿದೆ. ಯಶ್ ತಾಯಿ ನಿರ್ಮಾಣದ ಹೊಸ ಚಿತ್ರದ ಕಂಪ್ಲೀಟ್ ಮಾಹಿತಿ ನಾಳೆ ಅಧಿಕೃತವಾಗಿ ಹೊರ ಬೀಳಲಿದೆ. ನಿರ್ದೇಶಕರು ಯಾರು? ತಂತ್ರಜ್ಞರು ಯಾರೆಲ್ಲಾ ಇರುತ್ತಾರೆ? ನಟಿ ಯಾರು? ಸಿನಿಮಾದ ಹೆಸರೇನು? ಎನ್ನುವುದೆಲ್ಲವೂ ನಾಳೆ ಬಹಿರಂಗವಾಗಲಿದೆ.