ಅಮೆಜಾನ್ ಡೆಲಿವರಿ ವಸ್ತುಗಳನ್ನು ಇಬ್ಬರು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಮೈಕೋ ಲೇಔಟ್ ನ ರಂಕಾ ಕಾಲೋನಿ SNN ರಾಜ್ ಅಪಾರ್ಟ್ಮೆಂಟ್ ಹತ್ತಿರ ನಡೆದಿದೆ. ಅಮೆಜಾನ್ ಡೆಲಿವರಿ ಬಾಯ್ ಮಹೇಶ್ ಎಂಬುವವರು ಅಪಾರ್ಟ್ಮೆಂಟ್ ಗೆ ಐಟಮ್ಸ್ ಕೊಡಲು ತೆರಳಿದ್ದಾಗ, ದ್ವಿಚಕ್ರ ವಾಹನದಲ್ಲಿದ್ದ ವಸ್ತುಗಳನ್ನು ಖದೀಮರು ದೋಚಿದ್ದಾರೆ.
ಬ್ಲಾಕ್ ಪಲ್ಸರ್ ನಲ್ಲಿ ಬಂದಿದ್ದ ಇಬ್ಬರು ಖದೀಮರು ಹೊಂಚು ಹಾಕಿ ಡೆಲಿವರಿ ಬಾಯ್ ಹಿಂಬಾಲಿಸಿ ಕೃತ್ಯವೆಸಗಿದ್ದಾರೆ. ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಡೆಲಿವರಿ ಬಾಯ್ ಮಹೇಶ್ ಮೈಕೋ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಮೈಕೋ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಖದೀಮರಿಗಾಗಿ ಬಲೆ ಬೀಸಿದ್ದಾರೆ.