ಕೋಲಾರ: ಒಂದೇ ರಾತ್ರಿಯಲ್ಲಿ 20ಕ್ಕೂ ಅಧಿಕ ರೈತರ ತೋಟದಲ್ಲಿದ್ದ ಬೋರ್ ವೆಲ್ ಕೇಬಲ್ ಗಳನ್ನು ಖದೀಮರು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತೊರಗನದೊಡ್ಡಿ ಹಾಗೂ ಚಿಕ್ಕ ಹೊಸಹಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ. ಒಂದೇ ರಾತ್ರಿಯಲ್ಲಿ 20ಕ್ಕೂ ಅಧಿಕ ರೈತರ ತೋಟದಲ್ಲಿ ಖದೀಮರು ಕೇಬಲ್ ದೋಚಿ ಪರಾರಿಯಾಗಿದ್ದಾರೆ.

ಲಕ್ಷಾಂತರ ರೂ. ಮೌಲ್ಯದ ಕೇಬಲ್ ದೋಚಿದ್ದಕ್ಕೆ ರೈತರು ಕಂಗಾಲಾಗಿದ್ದಾರೆ. ಕೂಡಲೇ ಖದೀಮರನ್ನು ಪತ್ತೆ ಹಚ್ಚುವಂತೆ ರೈತರು, ಪೊಲೀಸರ ಮೊರೆ ಹೋಗಿದ್ದಾರೆ. ಸ್ಥಳಕ್ಕೆ ಬೂದಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.