ಬೆಂಗಳೂರು: ಎಲೆಕ್ಟ್ರಾನ್ ಸಿಟಿಯಲ್ಲಿ ಕನ್ಯಾಥಾನ್ ಆಯೋಜನೆ ಮಾಡಲಾಗಿದ್ದು, ಬೆಳ್ಳಂಬೆಳಗ್ಗೆ ಮಹಿಳೆಯರು ಓಡಿದ್ದಾರೆ.
ನಗರದ IFIM ಕಾಲೇಜಿನ ನೇತೃತ್ವದಲ್ಲಿ ಕನ್ಯಾಥಾನ್ ಆಯೋಜನೆ ಮಾಡಲಾಗಿತ್ತು. RUN FOR HER ಘೋಷಣೆಯೊಂದಿಗೆ ಸಾವಿರಾರು ಜನರ ಮಹಿಳೆ ಓಡಿದ್ದಾರೆ.
ಮಹಿಳೆಯರ ಸುರಕ್ಷತೆ ಜಾಗೃತಿಗಾಗಿ ಕನ್ಯಥಾನ್ ಆಯೋಜನೆ ಮಾಡಲಾಗಿತ್ತು. ಯುವಕ- ಯುವತಿಯರು ಈ ಕನ್ಯಾಥಾನ್ ನಲ್ಲಿ ಭಾಗವಹಿಸಿದ್ದರು.
ಐಟಿ- ಬಿಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಮಕ್ಕಳು ಭಾಗಿಯಾಗಿದ್ದರು. ಹತ್ತು ಕಿ.ಮೀಟವರೆಗೆ ಈ ಓಟ ಆಯೋಜನೆ ಮಾಡಲಾಗಿತ್ತು. ಟೆಕ್ಕಿಗಳೇ ಈ ಕನ್ಯಾಥಾನ್ ನಲ್ಲಿ ಭಾಗವಹಿಸಿದ್ದರು.