ಇತ್ತೀಚೆಗೆ ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಹೊಡೆದಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈಗ ಚಪ್ಪಲಿಯಿಂದ ಹೊಡೆದ ಮಹಿಳೆ ಹಾಗೂ ಪತಿ ಕ್ಷಮೆ ಕೇಳಿದ್ದಾರೆ.
ಬಿಹಾರ ಮೂಲದ ಪನ್ಪೂರಿ ಮಿಶ್ರಾ(28) ಎಂಬ ಮಹಿಳೆ ಹಲ್ಲೆ ಮಾಡಿದ್ದಳು. ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸವಿದ್ದ ಪನ್ಪೂರಿ ಮಿಶ್ರಾ, ಗರ್ಭೀಣಿಯಾಗಿದ್ದು ಆಸ್ಪತ್ರೆಗೆ ತೆರಳಿ, ಮರಳಿ ಬರುವಾಗ ಈ ಘಟನೆ ನಡೆದಿತ್ತು.
ಆಟೋ ಚಾಲಕರೊಬ್ಬರ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಆಟೋ ಚಾಲಕನ ಕಾಲಿಗೆ ಬಿದ್ದು ಮಹಿಳೆ ಹಾಗೂ ಆತನ ಪತಿ ಕ್ಷಮೆ ಕೇಳಿದ್ದಾರೆ. ನನ್ನಿಂದ ತಪ್ಪಾಯ್ತು ಅಂತ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾರೆ.
ಹಲ್ಲೆ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು. ಠಾಣೆಗೆ ಕರೆಯಿಸಿ ಪೊಲೀಸರು, ಮಹಿಳೆಯನ್ನು ವಿಚಾರಣೆ ನಡೆಸಿದ್ದರು.