ಶತಮಾನದ ಸಮರ ಆರಂಭವಾಗಿದೆ. ಭಾರತ-ಪಾಕಿಸ್ತಾನ ನಡುವೆ ಯುದ್ಧದ ಸೈರನ್ ಮೊಳಗಿಯಾಗಿದೆ. ಪರಸ್ಪರ ಕ್ಷಿಪಣಿ, ಆತ್ಮಾಹುತಿ ಡ್ರೋನ್ ದಾಳಿಗಳು ಅಬ್ಬರಿಸುತ್ತಲೇ ಸಾಗಿವೆ. ಹಾಗಂತಾ ಇದು ಕೇವಲ ಆರಂಭವಾ. ವಾಯುದಾಳಿ, ಕ್ಷಿಪಣಿ ದಾಳಿಗೂ ಮೀರಿದ ರಾಕ್ಷಸಿ ಅಸ್ತ್ರ ಉಭಯ ದೇಶಗಳಲ್ಲಿವೆಯಾ. ಯೆಸ್…ಭಾರತ ಮತ್ತು ಪಾಕ್ ಎರಡೂ ಅಣು ಬಾಂಬ್ ಹೊಂದಿರುವಂಥಾ ರಾಷ್ಟ್ರಗಳೇ.
ಹಾಗಂತಾ ಪಾಕಿಗೆ ಕುಮ್ಮಕ್ಕು ನೀಡೋ ಚೀನಾ ಕೂಡಾ ಅಣ್ವಸ್ತ್ರ ರಾಷ್ಟ್ರವೇ. ಹೀಗಾಗಿ ಈ ಯುದ್ಧ ಮತ್ತೊಂದು ಚರಣಕ್ಕೆ ತೆರೆದುಕೊಂಡ್ರೆ ಆಗ ಅಣ್ವಸ್ತ್ರ ಪ್ರಯೋಗ ಆಗೇಬಿಡುತ್ತಾ…ಇವತ್ತು ಪಾಕ್ ನೊಳಗೆ ನುಗ್ಗಿ ಹೊಡೆಯುತ್ತಿರೋ ಭಾರತದಿಂದ ಅಣ್ವಸ್ತ್ರವನ್ನು ಪಾಕ್ ಬಚ್ಚಿಟ್ಟಿರೋದೆಲ್ಲಿ.
ಪಾಕ್ ಅಣ್ವಸ್ತ್ರ ಕೋಠಿ ಇರುವುದಾದರೂ ಎಲ್ಲಿ?
ಈಗಾಗಲೇ ಭಾರತದ ಕ್ಷಿಪಣಿ ಸಮರ ಪಾಕಿಸ್ತಾನವನ್ನು ಇನ್ನಿಲ್ಲದಂತೆ ಪತರಗುಟ್ಟುವಂತೆ ಮಾಡಿದೆ. ಆ ದೇಶದ ವಾಣಿಜ್ಯ ನಗರಿ, ರಾಜಧಾನಿ, ಬಂದರು ನಗರಿ ಹೀಗೆ ಎಲ್ಲವೂ ಟಾರ್ಗೆಟ್ ಆಗಿ ಆಗಿದೆ. ಹಾಗಿದ್ರೆ ಈ ದಾಳಿಯಲ್ಲಿ ಅಣ್ವಸ್ತ್ರ ಇರೋ ನಗರದ ಮೇಲೆ ಅಟ್ಯಾಕ್ ಆಗಿಲ್ವಾ ಅನ್ನೋ ಪ್ರಶ್ನೆ ಮೂಡೋದು ಸಹಜ. ರಾಜಧಾನಿ ಇಸ್ಲಾಮಾಬಾದ್, ರಾವಲ್ಪಿಂಡಿ, ಲಾಹೋರ್, ಕರಾಚಿ ಪೈಕಿ ಎಲ್ಲಿದೆ ಪಾಕ್ ನ ಅಣ್ವಸ್ತ್ರ ಅನ್ನೋದೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಸರ್ಗೋಡಾದಲ್ಲಿದೆಯಾ ಪಾಕಿಸ್ತಾನದ ಅಣ್ವಸ್ತ್ರ?
ಹೌದು! ಪಾಕಿಸ್ತಾನದ ಅಣ್ವಸ್ತ್ರ ಕೋಠಿ ಇರೋದು ಸರ್ಗೋಡಾದಲ್ಲಿ. ಬ್ರಿಟೀಷ್ ಆಳ್ವಿಕೆಯಲ್ಲಿ ಪುಟ್ಟ ಗ್ರಾಮವಾಗಿದ್ದ ಸರ್ಗೋಡಾ ಇವತ್ತು ಪಾಕ್ ಸೇನೆಯ ಅತ್ಯಂತ ಸುರಕ್ಷಿತ ತಾಣ, ಅಸಲಿಗೆ ಸರ್ಗೋಡಾದಲ್ಲೇ ಏರ್ ಬೇಸ್ ಕೂಡ ಇದೆ. ಅಷ್ಟೇ ಅಲ್ವಲಾ 700 ಕಿಲೋಮೀಟರ್ ಅಂತರದಲ್ಲಿ ಜೇಕಾಬಾದ್ ಏರ್ ಬೇಸ್ ಕೂಡಾ ಇದೆ. ಈ ಅಣ್ವಸ್ತ್ರ ಕೋಠಿಯ ಕಾವಲಿಗೆ ಈ ಎರಡು ಏರ್ ಬೇಸ್ ಗಳಲ್ಲೇ ಎಫ್ 16 ಕಾವಲಿಗೆ ನಿಂತಿದೆ.
ಸರ್ಗೋಡದಿಂದ ಹೊರ ಬರುತ್ತಾ ಅಣ್ವಸ್ತ್ರ?
ಅಸ್ವಸ್ತ್ರವನ್ನು ಹೊಂದಿರುವ ಸರ್ಗೋಡಾ ಲಾಹೋರ್ ನಿಂದ 187 ಕಿಲೋಮೀಟರ್ ದೂರದಲ್ಲಿದೆ. ಇಸ್ಲಾಮಾಬಾದ್ ಬರೋಬ್ಬರಿ 241 ಕಿಲೋಮೀಟರ್ ಅಂದ್ರೆ ಕರಾಚಿ 1202 ಕಿಲೋಮೀಟರ್ ಇದೆ. ಇನ್ನು ಅಣ್ವಸ್ತ್ರ ಹೊಂದಿರುವ ಪಾಕ್ ಅದನ್ನು ಹೊತ್ತೊಯ್ಯ ಬಲ್ಲ ಕ್ಷಿಪಣಿ ಸಾಮರ್ಥ್ಯವನ್ನು ಹೊಂದಿದೆಯಾ? ಎಂಬ ಪ್ರಶ್ನೆ ಆವರಿಸಿತ್ತೆ. ಹೌದು, ಪಾಕಿಸ್ತಾನ ಅಣ್ವಸ್ತ್ರ ಹೊತ್ತು ನೆಗೆಯಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಹೊಂದಿದೆ.
ಈ ಪೈಕಿ ಅತ್ಯಂತ ಶಕ್ತಿ ಶಾಲಿ ಶಾಹೀನ್, ಅಬ್ದಾಲಿ, ಗೋರಿ, ಘಜನಿ, ನರ್ಸಾದಂಥಾ ಖಂಡಾಂತರ ಕ್ಷಿಪಣಿಗಳನ್ನು ಹೊಂದಿದೆ. ಆದರೆ, ಅಣ್ವಸ್ತ್ರ ಪ್ರಯೋಗಿಸುವ ತಾಕತ್ತು ಸದ್ಯಕ್ಕಂತೂ ಪಾಕ್ ಗಿಲ್ಲ ಯಾಕೆಂದರೆ ಪಾಕಿಗೆ ಹೋಲಿಸಿದರೆ ಭಾರತವೇ ಅತಿಹೆಚ್ಚು ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದೆ. ಈ ನಡುವೆ ಭಾರತೀಯ ಸೇನೆ ಸರ್ಗೋಡಾ ಪ್ರವೇಶಿಸಿ ಪಾಕ್ ಅಣ್ವಸ್ತ್ರವನ್ನೇ ತಮ್ಮ ಕಬ್ಜಾಗೆ ಪಡೆಯುವ ಪ್ಲ್ಯಾನ್ ಕೂಡ ಮಾಡುತ್ತಿದೆ.