ನವದೆಹಲಿ: ಕಾಲು ಕೆದರಿ ಜಗಳಕ್ಕೆ ಬರುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಮುಗಿ ಬಿದ್ದರೆ ಅದರ ಪರಿಸ್ಥಿತಿ ಏನಾಗಬಹುದು? ಎಂಬೆಲ್ಲ ಚರ್ಚೆಗಳು ಈಗ ಆರಂಭವಾಗಿವೆ.
ಒಂದು ರಾಷ್ಟ್ರದ ಶಕ್ತಿ ಯುದ್ಧದ ವೇಳೆ ತಿಳಿಯುತ್ತದೆ. ಶಸ್ತ್ರಾಸ್ತ್ರ, ಮದ್ದುಗುಂಡುಗಳ ಸಂಗ್ರಹದ ಆಧಾರದ ಮೇಲೆಯೂ ಆ ರಾಷ್ಟ್ರದ ಶಕ್ತಿಯನ್ನು ಪರಿಗಣಿಸಬಹುದು. ಈಗ ಭಾರತ ಹಾಗೂ ಪಾಕಿಸ್ತಾನಗಳ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿದೆ. ಹೀಗಾಗಿ ಈಗ ಎಲ್ಲರೂ ಎರಡೂ ರಾಷ್ಟ್ರಗಳ ಬಲಾಬಲದ ಕುರಿತು ಚರ್ಚಿಸುತ್ತೇವೆ. ಒಂದು ವೇಳೆ ಪಾಕಿಸ್ತಾನದ ವಿರುದ್ಧ ಭಾರತ ಮುಗಿ ಬಿದ್ದರೆ, ಕೇವಲ ನಾಲ್ಕೇ ದಿನಗಳಲ್ಲಿ ಪಾಕ ನಿರ್ಣಾಮವಾಗುವುದು ಶತಸಿದ್ಧ ಎನ್ನಲಾಗುತ್ತಿದೆ.
ಅದರ ಬತ್ತಳಿಕೆಯಲ್ಲಿರುವ ಮದ್ದು, ಗುಂಡುಗಳು, ಸಸ್ತ್ರಾಸ್ತ್ರಗಳು ಸಂಪೂರ್ಣ ಖಾಲಿಯಾಗುತ್ತವೆ ಎನ್ನಲಾಗುತ್ತಿದೆ. ರಷ್ಯಾ ಜೊತೆ ದೀರ್ಘಾವಧಿ ಯುದ್ಧದಲ್ಲಿರುವ ಉಕ್ರೇನ್ ದೇಶಕ್ಕೆ ಪಾಕಿಸ್ತಾನ ಸಾಕಷ್ಟು ಮದ್ದುಗುಂಡುಗಳನ್ನು ಪೂರೈಸಿದೆ. ಹೀಗಾಗಿ ಪಾಕ್ ಶಕ್ತಿ ಕುಂದಿದೆ. ತೀವ್ರ ಯುದ್ಧ ನಡೆದಲ್ಲಿ ಪಾಕಿಸ್ತಾನದಲ್ಲಿರುವ ಮದ್ದುಗುಂಡುಗಳು 96 ಗಂಟೆಗಳಲ್ಲಿ ಮುಗಿದುಹೋಗುತ್ತದೆಯಂತೆ.
ಯುದ್ಧದಲ್ಲಿ ಯುದ್ಧ ವಿಮಾನ, ಕ್ಷಿಪಣಿ, ಮದ್ದು ಗುಂಡುಗಳೇ ಬೇಕು. ಪಾಕಿಸ್ತಾನದ ಎಂ109 ಹೋವಿಟ್ಜರ್ ಗನ್ಗಳಿಗೆ ಬೇಕಾದ 155 ಎಂಎಂ ಶೆಲ್ಗಳು, ಬಿಎಂ-21 ಸಿಸ್ಟಮ್ಸ್ಗೆ ಬೇಕಾದ 122 ಎಂಎಂ ರಾಕೆಟ್ಗಳು ಪಾಕಿಸ್ತಾನದ ಬಳಿ ಸಾಕಷ್ಟು ಇಲ್ಲ. ಹೀಗಾಗಿ ಪಾಕ್ ಕೇವಲ ನಾಲ್ಕೇ ದಿನದಲ್ಲಿ ಉಡೀಸ್ ಆಗಲಿದೆ. ಒಂದು ವೇಳೆ ಯುದ್ಧ ಆರಂಭವಾದರೆ, ಪಾಕಿಗಳಿಗೆ ಚೀನಾ ಸಹಾಯ ಮಾಡಿದರೆ ಅದರ ಶಕ್ತಿ ಹೆಚ್ಚಬಹುದು. ಚೀನಾ ಏನಾದರೂ ಯೂ ಟರ್ನ್ ಹೊಡೆದರೆ ಪಾಕಿಸ್ತಾನದ ಗತಿ ಮಾತ್ರ ಅಧೋಗತಿ.