ಕನ್ನಡದ ನಟಿ ಶ್ರೀಲೀಲಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈಗ ಅವರು ಸೋಷಿಯಲ್ ಮೀಡಿಯಾದಲ್ಲಿ ಅರಿಶಿಣ ಶಾಸ್ತ್ರದ ಫೋಟೋ ಹಾಕಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಶ್ರೀಲೀಲಾ ಫೋಟೋ ನೋಡಿದ ಅಭಿಮಾನಿಗಳು ಮದ್ವೆ ಆಗುತ್ತಿದೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆ ಫೋಟೊದಲ್ಲಿ ಶ್ರೀಲೀಲಾ ಥೇಟ್ ಮದುಮಗಳಂತೆ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಮದುವೆಯ ಸಂಭ್ರಮ ಅಂತೂ ಖಂಡಿತ ಅಲ್ವೇ ಅಲ್ಲ. ಹೌದು, ಶ್ರೀಲೀಲಾ ಅವರ ಹುಟ್ಟುಹಬ್ಬ ಸಮೀಪಿಸುತ್ತಿದೆ. ಬರ್ತ್ ಡೇಗೂ ಮುಂಚೆಯೇ ಅವರ ತಾಯಿ ಸ್ವರ್ಣಲತಾ ಶ್ರೀಲೀಲಾಗೆ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ನಟಿಯ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆದಿದೆ. ಶ್ರೀಲೀಲಾ ಕೆನ್ನೆಗೆ ಅರಿಶಿಣ, ಹಣೆಗೆ ಕುಂಕುಮ ಇಡಲಾಗಿದೆ. ಇಬ್ಬರೂ ಹಿರಿಯ ಮಹಿಳೆಯರು ನಟಿಗೆ ಅರಿಶಿಣ ಹಚ್ಚುತ್ತಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ‘ಕಮಿಂಗ್ ಸೂನ್’ ಎಂದು ಬರೆದುಕೊಂಡಿದ್ದಾರೆ.
ನಟಿ ಶ್ರೀಲೀಲಾ ಸಿನಿಮಾಗಳಿಗಿಂತ ತನ್ನ ವೈಯಕ್ತಿಕ ವಿಚಾರಗಳಲ್ಲಿಯೇ ಹೆಚ್ಚು ಸುದ್ದಿಯಾಗ್ತಾ ಇದ್ದು, ನಟ ಕಾರ್ತಿಕ್ ಆರ್ಯನ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.