ಮುಂಬೈ: ಸಂಪತ್ತು ಎನ್ನುವುದಕ್ಕೆ ಪರ್ಯಾಯ ಹೆಸರು ಅಂದ್ರೆ ಅದು ಅಂಬಾನಿ. ಅಂಬಾನಿ ಅಂದರೆ ಶ್ರೀಮಂತ. ಶ್ರೀಮಂತಿಕೆ ಅಂದರೆ ಅಂಬಾನಿ ಎನ್ನುವಷ್ಟರ ಮಟ್ಟಿಗಾಗಿದೆ. ಆದರೆ, ಇವತ್ತು ನಾವು ನಿಮಗೆ ಹೇಳಲು ಹೊರಟಿರುವ ವಿಷಯ ಕೇಳಿದರೆ ನೀವು ಶಾಕ್ ಆಗುತ್ತೀರಿ.
ಹೌದು! ಮುಖೇಶ್ ಹಾಗೂ ನೀತಾ ಅಂಬಾನಿಯ ಪುತ್ರಿ ಇಶಾರ ಆ ದೊಡ್ಡ ನಿರ್ಧಾರ ಎಂಥವರನ್ನೂ ಶಾಕ್ ಆಗುವಂತೆ ಮಾಡಿದೆ. ಯಾಕೆಂದ್ರೆ ಅಪ್ಪ ಆಗರ್ಭ ಶ್ರೀಮಂತ ಇನ್ನು ಮಾವನೂ ಕುಬೇರ ಕುಲದವರೇ. ಹೀಗಿದ್ದೂ ಇಶಾ ಅಂಬಾನಿ ಆ ಮನೆ ಮಾರಿದ್ದಾದ್ರು ಯಾಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಇಶಾರ ಲಾಸ್ ಏಂಜಲೀಸ್ ಮನೆ ಮಾರಾಟ
ಅದು ಅಮರಿಕದ ಶ್ರೀಮಂತರ ನೆಲೆಬೀಡು ಲಾಸ್ ಏಂಜಲೀಸ್. ಇಂತಹ ಎಲ್ ಎನಲ್ಲಿ ಇಶಾ ಅಂಬಾನಿ ವೈಭವೋಪೇತ ಬಂಗಲೆ ಹೊಂದಿದ್ದರು. ಆದರೆ, ಇದೀಗ ಏಕಾಏಕಿ ಈ ಬಂಗಲೆಯನ್ನು ಖ್ಯಾತ ಹಾಲಿವುಡ್ ತಾರಾ ದಂಪತಿಗೆ ಮಾರಾಟ ಮಾಡಲಾಗಿದೆ.
ಜೆನಿಫರ್ ಲೊಪೆಜ್ ದಂಪತಿಗೆ ಮನೆ ಮಾರಾಟ
ಇಶಾ ಅಂಬಾನಿ ಔಷದೋದ್ಯಮದ ಕಿಂಗ್ ಅಂತಲೇ ಕರೆಯಿಸಿಕೊಳ್ಳುವ ಪಿರಾಮಲ್ ಗ್ರೂಪ್ಸ್ ನ ಮನೆ ಸೊಸೆ. ಅಪ್ಪ ಶ್ರೀಮಂತರಾದರೆ ಮಾವನೂ ಸಂಪತ್ತಿನ ಸಾಮ್ರಾಟ. ಇಂತಹ ಕುಟುಂಬದ ಸೊಸೆಯಾಗುತ್ತಿದ್ದಂತೆ ಇಶಾಗೆ ಅವರ ಮಾವ ಅಜಯ್ ಪಿರಾಮಲ್ ಲಾಸ್ ಏಂಜಲೀಸ್ ನಲ್ಲಿ ಅರಮನೆಯಂತಹ ಬಂಗ್ಲೆಯನ್ನು ಗಿಫ್ಟ್ ನೀಡಿದ್ದರು. ಅದೇ ಮನೆಯನ್ನೀಗ ಇಶಾ ಹಾಲಿವುಡ್ ನ ತಾರಾ ದಂಪತಿ ಜೆನಿಫರ್ ಲೊಪೆಜ್ ಗೆ ಮಾರಾಟ ಮಾಡಿದ್ದಾರೆ. ಅದು ಬರೋಬ್ಬರಿ 508 ಕೋಟಿ ರೂಪಾಯಿಗೆ ಅನ್ನೋದು ವಿಶೇಷ.
12 ಬೆಡ್ ರೂಂ, 2 ಸ್ವಿಮ್ಮಿಂಗ್ ಪೂಲ್
ಜೆನಿಫರ್ ಲೊಪೆಜ್ ಗೆ ಮಾರಾಟವಾಗಿರುವ ಬಂಗಲೆ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಅದ್ಧೂರಿ ಬಂಗ್ಲೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 12 ಬೆಡ್ ರೂಂ ಗಳನ್ನು ಹೊಂದಿದೆ. ಒಳಾಂಗಣ ಮತ್ತು ಹೊರಾಂಗಣದಲ್ಲಿ 2 ಸ್ವಿಮ್ಮಿಂಗ್ ಪೂಲ್ ಗಳನ್ನು ಹೊಂದಿದೆ. ಅಷ್ಟೇ ಅಲ್ಲಾ 24 ಬಾತ್ ರೂಮ್ ಗಳಿರುವ ಈ ಅರಮನೆಯಲ್ಲಿ ಅತ್ಯಾಧುನಿಕ ಜಿಮ್, ಸಲೂನ್, ಸ್ಪಾ ಸೇರಿದಂತೆ ಹಲವು ಬೆಲೆಬಾಳುವ ಗಿಡಗಳನ್ನು ಹೊಂದಿರುವ ಅಭೂತ ಪೂರ್ವ ಹೂದೋಟಗಳಿವೆ.
ಇಂತಹ ಅರಮನೆಯಂತಹ ಮನೆಯನ್ನು ಇಶಾ ಮಾರಾಟ ಮಾಡಿದ್ದಾರೆ. ಹಾಗಂತಾ ಲಾಸ್ ಏಂಜಲೀಸ್ ನಲ್ಲಿ ಇಶಾಗೆ ಇದೊಂದೇ ಆಸ್ತಿಯಲ್ಲ. ಇಂತಹ ಹತ್ತಾರು ಬಂಗಲೆಗಳಿವೆಯಂತೆ. ಹೀಗಾಗಿಯೇ ಈ ಮನೆಯನ್ನೀಗ ಅವರು ಮಾರಾಟ ಮಾಡಿದ್ದಾರೆ. ಇತ್ತ ಮುಂಬೈನಲ್ಲಿ ಮಗಳಿಗಾಗಿ ತಂದೆ ಮುಖೇಶ್ ಅಂಬಾನಿ ಡೈಮಂಡ್ ಮಾದರಿಯ ಅತ್ಯದ್ಭುತ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಮೌಲ್ಯವೂ 500 ಕೋಟಿಗೂ ಹೆಚ್ಚು ಬಾಳುತ್ತೆ ಎನ್ನಲಾಗುತ್ತಿದೆ.