ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ 2028ರಲ್ಲಿ ಅಧಿಕಾರಕ್ಕೆ ಬರಲ್ಲ. ಹಾಗೇನಾದರೂ ಆದರೆ ನಾನೇ ಅವರಿಗೆ ಬಟ್ಟೆ ಹೊಲಿಸಿ ಕೊಡ್ತೀನಿ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಹೇಳಿದ ಮಾತಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.
ಈ ವಿಷಯವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅವರ ಪಾಪದ ಹಣದಿಂದ ಯಾರಿಗೆ ಬೇಕಿದೆ ಬಟ್ಟೆ? ನಾಡಿನ ಜನತೆ ತಮಗೆ ಬಟ್ಟೆ ಕೊಡುತ್ತಾರೆ. ಅವರಿಂದ ಬಟ್ಟೆ ಹೊಲಿಸಿಕೊಳ್ಳುವ ದಾರದ್ರ್ಯ ತನಗೆ ಬಂದಿಲ್ಲ. ಅವರಿಗೆ ದಾರಿದ್ರ್ಯ ಬಂದೊದಗಿದೆ. ಅವರಲ್ಲಿರುವುದು ಪಾಪದ ಹಣ, ಅದರಿಂದ ಬಟ್ಟೆ ಹೊಲಿಸಿಕೊಳ್ಳುವ ಸ್ಥಿತಿ ರಾಜ್ಯದ ಜನ ತನಗೆ ನೀಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.