ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ಪುತ್ರಿ ಸಾರಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಾನೆ ಇರುತ್ತಾರೆ. ಈ ಹಿಂದೆ ಅವರ ಅಫೇರ್ ವಿಚಾರ ಬಹುಕಾಲ ಹಲ್ ಚಲ್ ಎಬ್ಬಿಸಿದ್ದು ಸುಳ್ಳಲ್ಲ. ಆದರೀಗ ನಿಜಕ್ಕೂ ಸಾರಾ ಬಾಳಲ್ಲಿ ಇರುವರು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸಚಿನ್ ಪುತ್ರಿ ಸದ್ಯಕ್ಕೆ ಬಾಲಿವುಡ್ ನ ಗಲ್ಲಿಬಾಯ್ ಸಿದ್ದಾರ್ಥ್ ಚತುರ್ವೇದಿ ಜೊತೆ ಭರ್ಜರಿ ಓಡಾಟ ನಡೆಸಿದ್ದಾರಂತೆ. ಮುಂಬೈನ ಹತ್ತಾರು ಪಾರ್ಟಿಗಳಲ್ಲಿ ಈ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಹೊಸ ರಿಲೇಷನ್ ನ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಬ್ಯಾಟರ್ ಶುಭಮನ್ ಗಿಲ್ ಜೊತೆ ಡೇಟಿಂಗ್ ನಲ್ಲಿದ್ದ ಸರಾ ಇದೀಗ ದಿಢೀರ್ ಸಿದ್ಧಾರ್ಥ್ ಜೊತೆ ಮಿಂಚುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಶುಭಮನ್ ಕೂಡ ತಾವು ಇನ್ನೂ ಸಿಂಗಲ್ ಅಂತಾ ಹೇಳುವ ಮೂಲಕ ಸಾರಾ ಜೊತೆಗಿನ ಬ್ರೇಕ್ ಅಪ್ ನ್ನು ಖಚಿತ ಪಡಿಸಿದರು. ಅಂದು ಕ್ರಿಕೆಟರ್ ಜೊತೆ ಲವ್ವಲ್ಲಿ ಬಿದ್ದಿದ್ದ ತೆಂಡೂಲ್ಕರ್ ಪುತ್ರಿ ಇದೀಗ ಬಾಲಿವುಡ್ ತಾರೆಯ ತೆಕ್ಕೆಗೆ ಜಾರಿದ್ದಾರೆ ಎನ್ನಲಾಗುತ್ತಿದೆ.