ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.

ನಟಿ ರಶ್ಮಿಕಾಗೆ ಫೋಟೊ ಕ್ರೇಜ್ ತುಂಬಾ ಇದೆ. ಆಗಾಗ ಫೋಟೊಸ್ ಗೆ ಚೆಂದದ ಪೋಸ್ ನೀಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇಷ್ಟು ದಿನ ಗ್ಲಾಮರಸ್ ಲುಕ್ ನಲ್ಲಿ ಪೋಸ್ ನೀಡುತ್ತಿದ್ದ ನಟಿ ಇದೀಗ ಲಕ್ಷಣವಾಗಿ ಸೀರೆ ಉಟ್ಟು ಮಿಂಚಿದ್ದಾರೆ.

ರಶ್ಮಿಕಾ ಫೋಟೊಸ್ ನೋಡಿ ಅಭಿಮಾನಿಗಳಲ್ಲಿ ಕೆಲವು ಗೊಂದಲ ಸೃಷ್ಟಿಯಾಗಿದೆ. ಈ ಮೊದಲು ‘ಗೀತ ಗೋಂವಿಂದಂ’ ಚಿತ್ರಕ್ಕೆ ಐದು ವರ್ಷ ಆದಾಗ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಹಾಗೂ ಚಿತ್ರದ ನಿರ್ದೇಶಕ ಪರಶುರಾಮ್ ಪೆಟ್ಲಾ ಅವರು ಒಂದು ಜಾಗದಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದರು.

ಇದೀಗ ಅದೇ ಜಾಗದಲ್ಲಿ ನಟಿ ರಶ್ಮಿಕಾ ಪೋಸ್ ಕೊಟ್ಟಿದ್ದಾರೆ.

ಇದು ವಿಜಯ್ ದೇವರಕೊಂಡ ಮನೆ ಎನ್ನಲಾಗುತ್ತಿದ್ದು, ಆ ಸೀರೆಯನ್ನು ನಟಿ ರಶ್ಮಿಕಾಗೆ ಕೊಟ್ಟಿದ್ದು ಯಾರು? ರಶ್ಮಿಕಾ ಫೋಟೊಗಳನ್ನು ವಿಜಯ್ ದೇವರಕೊಂಡ ಕ್ಲಿಕ್ಕಿಸಿದ್ದರಾ? ಎಂಬ ಹಲವು ಪ್ರಶ್ನೆಗಳು ಮೂಡಿವೆ.