ಬೆಂಗಳೂರು: ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಸದ್ಯ ಬಾಲಿವುಡ್ ನಲ್ಲಿ ಸಕ್ಕತ್ ಬ್ಯುಸಿಯಾಗಿದ್ದಾರೆ. ಇಷ್ಟೊಂದು ಬ್ಯೂಸಿಯ ಮಧ್ಯೆಯೂ ರಶ್ಮಿಕಾ ಆಗಾಗ ಇನ್ಸ್ಟಾದಲ್ಲಿ ಚಂದದ ಫೋಟೋಸ್ ಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ರೋಸ್ ಹಿಡಿದು ತೆಗೆಸಿಕೊಂಡಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಈ ಫೋಟೋ ನೋಡಿದ ಅಭಿಮಾನಿಗಳಂತೂ ಶ್ರೀವಲ್ಲಿಗೆ ಗುಲಾಬಿ ಕೊಟ್ಟಿದ್ದು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಗುಲಾಬಿ ಹೂವು ಕೊಟ್ಟಿದ್ದು ಬೇರೆ ಯಾರೂ ಅಲ್ಲ. ಅವರೇ ಗುಲಾಬಿ ಹೂವು ಖರೀದಿಸಿ ತಮಗೆ ತಾವೇ ಗಿಫ್ಟ್ ಕೊಟ್ಟುಕೊಂಡಿದ್ದಾರೆ.

ಇದಕ್ಕೆ ಕಾರಣ ಏನು ಎಂಬುವುದನ್ನು ಅವರು ವಿವರಿಸಿದ್ದಾರೆ. ಅವರ ಮಾತು ಅನೇಕರಿಗೆ ಇಷ್ಟ ಆಗಿದೆ. ಕೊನೆಯ ಬಾರಿಗೆ ನಿಮಗೆ ಹೂ ಸಿಕ್ಕಿದ್ದು ಯಾವಾಗ? ನಿಮ್ಮನ್ನು ಆಗಾಗ್ಗೆ ಪ್ರಶಂಸಿಸಲು ಮತ್ತು ಧನ್ಯವಾದ ಹೇಳಲು ಹೂವನ್ನು ಕೊಟ್ಟುಕೊಳ್ಳಬೇಕು. ಏಕೆಂದರೆ ನೀವು ಜಗತ್ತಿನ ಎಲ್ಲಾ ಪ್ರೀತಿ ಮತ್ತು ದಯೆಗೆ ಅರ್ಹರು’ ಎಂದು ರಶ್ಮಿಕಾ ಕ್ಯಾಪ್ಶನ್ ನೀಡಿದ್ದಾರೆ.
ರಶ್ಮಿಕ ಮಂದಣ್ಣ, ಪುಷ್ಪ ಸಿನಿಮಾ ನಂತರ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಶ್ಮಿಕಾ ಬಾಯ್ಫ್ರೆಂಡ್ ವಿಚಾರ ಸಾಕಷ್ಟು ಸುದ್ದಿಯಾಗ್ತಿದ್ದು ಅವರ ಬಾಯ್ಫ್ರೆಂಡ್ ಯಾರು ಎಂದು ಅವರೇ ರಿವೀಲ್ ಮಾಡಬೇಕಿದೆ..