ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಮಕ್ಕಳಿಗೆ ತಾಯಿಯೇ ಮೊದಲ ಗುರು ಆಗಿದ್ದರು ಕೂಡ ಜೀವನದಲ್ಲಿ ಮಕ್ಕಳನ್ನು ತಿದ್ದಿ ಬುದ್ದಿ ಕಲಿಸುವ ಜವಾಬ್ದಾರಿ ಶಿಕ್ಷಕರಿಗೆ ಇರುತ್ತದೆ. ಆದರೆ, ಶಿಕ್ಷಕರು ಪಾಠ ಮಾಡುವುದನ್ನು ಮರೆತರೆ ವಿದ್ಯಾರ್ಥಿಗಳ ಬದುಕು ಏನಾಗುತ್ತದೆ?
ಶಿಕ್ಷಕರ ಮೇಲೆ ಅಪಾರವಾದ ಗೌರವ ನಂಬಿಕೆ ಪ್ರೀತಿ ನಮ್ಮ ಸಮಾಜದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಶಿಕ್ಷಕರು ಬೇಕಾಬಿಟ್ಟಿ ಪಾಠ ಮಾಡುವುದರ ಜೊತೆಗೆ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವುದನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಂದು ಕಡೆ ಶಿಕ್ಷಕಿಯೊಬ್ಬರು ಕ್ಲಾಸ್ ರೂಮಿನಲ್ಲೇ ಕುಳಿತು ನಿದ್ದೆಗೆ ಜಾರಿರುವ ಘಟನೆ ನಡೆದಿದೆ. ಯಾರೋ ಈ ವಿಡಿಯೋವನ್ನು ವೈರಲ್ ಮಾಡಿದ್ದು, ಇದು ಚರ್ಚೆಗೆ ಗ್ರಾಸವಾಗುತ್ತಿದೆ.