ಬೆಂಗಳೂರು: ಪರ್ಸ್ ನಲ್ಲಿಯೋ, ಜೇಬಿನಲ್ಲಿಯೋ ಇಟ್ಟುಕೊಂಡ ಪ್ಯಾನ್ ಕಾರ್ಡ್ ಕಳೆದುಹೋಗುತ್ತದೆ. ಎಲ್ಲಿ ಕಳೆದುಕೊಂಡಿದ್ದೇವೆ ಎಂಬುದು ಗೊತ್ತಾಗದೆ ತಡಕಾಡುತ್ತೇವೆ. ಕೊನೆಗೆ ಪ್ಯಾನ್ ಕಾರ್ಡ್ (PAN Card) ಸಿಗದಿದ್ದಾಗ ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತದೆ. ಆದರೆ, ಯಾರೇ ಪ್ಯಾನ್ ಕಾರ್ಡ್ ಕಳೆದುಕೊಂಡರೆ, ಚಿಂತೆ ಮಾಡುವುದು ಬೇಡ. ಹಲವು ವಿಧಾನಗಳ ಮೂಲಕ ಪ್ಯಾನ್ ಕಾರ್ಡ್ ಸಮಸ್ಯೆಯನ್ನು ಬಗೆಹಿರಿಸಿಕೊಳ್ಳಬಹುದಾಗಿದೆ.
ಕಳೆದರೆ ಏನು ಮಾಡಬೇಕು?
ಪ್ಯಾನ್ ಕಾರ್ಡ್ ಕಳೆದುಹೋಗಿದೆ, ಈಗ ತುರ್ತಾಗಿ ಪ್ಯಾನ್ ಕಾರ್ಡ್ ಬೇಕು ಎಂದರೆ, ಮೊದಲು ಜನ ಇ-ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಎನ್ಎಸ್ ಡಿಎಲ್ ವೆಬ್ ಪೋರ್ಟಲ್ ಆಗಿರುವ https://www.onlineservices.nsdl.com ಗೆ ಭೇಟಿ ನೀಡಿ ಪ್ಯಾನ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಇದು ತುರ್ತು ಕೆಲಸಗಳಿಗೆ ಸಹಕಾರಿಯಾಗುತ್ತದೆ. ಹಾಗೆಯೇ, ಯುಟಿಐಐಟಿಎಸ್ಎಲ್ ಹಾಗೂ ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಮೂಲಕವೂ ಇ-ಪ್ಯಾನ್ ಕಾರ್ಡ್ ಪಡೆಯಬಹುದು.
ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸೋದು ಹೇಗೆ?
- ಟಿಐಎನ್-ಎನ್ಎಸ್ಡಿಎಲ್ (TIN-NSDL) ವೆಬ್ ಸೈಟ್ ಗೆ ಭೇಟಿ ನೀಡಬೇಕು
- ಪ್ಯಾನ್ ಕಾರ್ಡ್ ಗಾಗಿ ಆನ್ ಲೈನ್ ಅರ್ಜಿ ವಿಭಾಗಕ್ಕೆ ತೆರಳಬೇಕು
- ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು
- ಕಳೆದುಹೋದ ಪ್ಯಾನ್ ಸಂಖ್ಯೆ, ಹೆಸರು, ಸಂವಹನ ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ಐಡಿ ಸೇರಿ ವಿವಿಧ ಮಾಹಿತಿ ಒದಗಿಸಬೇಕು
- ಗುರುತಿನ ಚೀಟಿ, ವಿಳಾಸದ ಪುರಾವೆ ಮತ್ತು ಜನ್ಮ ದಿನಾಂಕದ ಪುರಾವೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ ಲೋಡ್ ಮಾಡಿಬೇಕು
- ಶುಲ್ಕವನ್ನು ಆನ್ ಲೈನ್ ನಲ್ಲಿ ಪಾವತಿಸಬೇಕು
- ಇದಾದ ಬಳಿಕ ಪ್ರಕ್ರಿಯೆ ಮುಗಿಯುತ್ತದೆ, ಪ್ಯಾನ್ ಕಾರ್ಡ್ ನಿಮ್ಮ ವಿಳಾಸಕ್ಕೆ ಕಳುಹಿಸಲಾಗುತ್ತದೆ