ಬೆಂಗಳೂರು: ಸ್ಟೇಡಿಯಂಗೆ ನುಗ್ಗಿ ವಿರಾಟ್ ಕೊಹ್ಲಿ ಹಗ್ ಮಾಡ್ತೇನಿ ಅಂದವನಿಗೆ ಪೊಲೀಸರು ಪಾಠ ಮಾಡಿದ್ದು, ಈಗ ಯುವಕ ಚಾಲೆಂಜ್ ನಿಂದಲೇ ಹಿಂದೆ ಸರಿಯುವುದಾಗಿ ಹೇಳಿದ್ದಾನೆ.

ಲೈಕ್ಸ್, ವೀವ್ಸ್ ಗಾಗಿ ಹುಚ್ಚಾಟ ಮಾಡಿದ್ದ ಯುವಕನಿಗೆ ಪೊಲೀಸರು ಪಾಠ ಮಾಡಿದ್ದಾರೆ. ಇಂದು ನಡೆಯುತ್ತಿರುವ ಆರ್ ಸಿಬಿ ಹಾಗೂ ಕೆಕೆಆರ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ಹಗ್ ಮಾಡುವುದಾಗಿ ಯುವಕ ವಿಡಿಯೋ ಮಾಡಿ ಹರಿ ಬಿಟ್ಟಿದ್ದ. ಇದನ್ನ ಗಮನಿಸಿದ ಪೊಲೀಸರು ಯುವಕ ಶರಣ್ ನನ್ನು ವಶಕ್ಕೆ ಪಡೆದಿದ್ದರು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಮುನ್ನೆಚ್ಚರಿಕ ಕ್ರಮವಾಗಿ ವಶಕ್ಕೆ ಪಡೆದಿರುವ ಕಬ್ಬನ್ ಪಾರ್ಕ್ ಪೊಲೀಸರು, ಪಾಠ ಮಾಡಿದ್ದಾರೆ. ಅಲ್ಲದೇ, ಪಂದ್ಯ ಮುಗಿಯುವವರೆಗೂ ಹೊರಗೆ ಬಿಡುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಯುವಕ ಶರಣ್, ಇನ್ಸ್ಟಾಗ್ರಾಂನಲ್ಲಿ ತಪ್ಪಾಯ್ತು ಅಂತ ವಿಡಿಯೋ ಮಾಡಿದ್ದಾನೆ. ಜೊತೆಗೆ ಇವತ್ತು ಮ್ಯಾಚ್ ಮುಗಿಯುವರೆಗೆ ಠಾಣೆಯಲ್ಲೇ ಇರುತ್ತೇನೆ ಎಂದು ಸ್ಟೋರಿ ಹಾಕಿದ್ದಾನೆ.