ಬೆಂಗಳೂರು: ನಮ್ಮವರನ್ನು ಪಾಕಿಸ್ತಾನ ಉಗ್ರರು ಸಾಯಿಸುತ್ತಾರೆ ಅಂದ್ರೆ, ಯುದ್ಧ ಮಾಡಲೇಬೇಕು ಎಂದು ನಿರ್ದೇಶಕ ಪ್ರೇಮ್ (Director Prem) ಹೇಳಿದ್ದಾರೆ.
ನಟ, ನಿರ್ದೇಶಕ ಪ್ರೇಮ್ ಪಹಲ್ಗಾಮ್ ಉಗ್ರರ ದಾಳಿಯನ್ನು (Pahalgam Terror Attack) ತೀವ್ರವಾಗಿ ಖಂಡಿಸಿದ್ದಾರೆ. ಉಗ್ರರಿಗೆ ದಯೆ ತೋರಿಸಬಾರದು. ಅಮಾಯಕ ಜೀವಗಳನ್ನ ತೆಗೆದಿದ್ದಾರೆ ಅಂದ್ರೆ ಅವರನ್ನೆಲ್ಲ ಕತ್ತರಿಸಿ, ಪೀಸ್ ಮಾಡಿ ಎಸೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿಯವ್ರು (Narendra Modi) ಇದ್ದಾರೆ. ಅವರು ಇದನ್ನು ಹ್ಯಾಂಡಲ್ ಮಾಡುತ್ತಾರೆ. ಪಾಕಿಸ್ತಾನಿಗರನ್ನು ಹೊಡಲಿ ಅಂತಾನೇ ನಾವು ಕಾಯುತ್ತಿದ್ದೇವೆ ಎಂದಿದ್ದಾರೆ.