ಗಾಂಧಿನಗರ: ಪಾಕಿಸ್ತಾನದೊಳಗೆ 100 ಕಿ.ಮೀ. ದೂರದಲ್ಲಿರುವ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಸಂಘಟನೆಗಳ ಪ್ರಧಾನ ಕಚೇರಿಯವರೆಗೆ ನಮ್ಮ ಸೇನೆ ನುಗ್ಗಿ ಹೊಡೆದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರಲ್ಲಿ ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ಪಾಕಿಸ್ತಾನ ಪ್ರಾಯೋಜಿಸಿದ ಭಯೋತ್ಪಾದಕರಿಗೆ, ಅದು ಉರಿಯಾಗಿರಲಿ, ಪುಲ್ವಾಮಾ ಆಗಿರಲಿ ಅಥವಾ ಪಹಲ್ಗಾಮ್ ಆಗಿರಲಿ ಸೂಕ್ತವಾದ ಪ್ರತ್ಯುತ್ತರ ನೀಡಿದ್ದೇವೆ. ಪಾಕಿಸ್ತಾನದೊಳಗೆ 100 ಕಿ.ಮೀ. ದಾಳಿ ಮಾಡುವ ಮೂಲಕ ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡಿವೆ ಎಂದಿದ್ದಾರೆ.
ಜನರ ವಿರುದ್ಧ ಯಾವುದೇ ಭಯೋತ್ಪಾದಕ ಚಟುವಟಿಕೆ ನಡೆದರೆ, ಅದರ ಪ್ರತಿಕ್ರಿಯೆ ಎರಡು ಪಟ್ಟು ಬಲವಾಗಿರುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಈಗಾಗಲೇ ಭಾರತ ನೀಡಿದೆ ಎಂದು ಗುಡುಗಿದ್ದಾರೆ.