ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಯಾವ ರೀತಿಯಲ್ಲಾಗಿದೆ ಎಂದು ದಾಖಲೆ ಸಹಿತ ರಾಹುಲ್ ಪ್ರಸ್ತುತ ಪಡಿಸಿದ್ದಾರೆ. ಅದರ ವಿರುದ್ದ ಇಂದು(ಶುಕ್ರವಾರ) ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕವಾಗಿದೆ. ಬಿಜೆಪಿ ಕೇವಲ ಅಧಿಕಾರದ ದಾಹದಿಂದಲೇ ಇಡಿ, ಸಿಬಿಐ ಎಲ್ಲವನ್ನ ದುರ್ಬಲಗೊಳಿಸುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಮಹದೇವಪುರ ಕ್ಷೇತ್ರದಲ್ಲಿ 6 ಲಕ್ಷ ಮತದಾರರಿದ್ದಾರೆ. ಬಹಳ ದೊಡ್ಡ ತಂತ್ರಗಾರಿಕೆಯನ್ನು ಬಳಸಿ ಎಲ್ಲಿ ಯಾವಾಗ ಮತ ಕಳ್ಳತನ ಮಾಡುತ್ತಾರೆ ಎನ್ನುವುದೇ ತಿಳಿಯುವುದಿಲ್ಲ ಎಂದಿದ್ದಾರೆ.