ರಾಮಸೇನೆ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ವಿರೋಧಿಸಿ ಜುಲೈ 3 ರಂದು ರಾಮಸೇನೆಯಿಂದ ಇಂಗಳಿ ಚಲೋ ಕರೆ ನೀಡಲಾಗಿತ್ತು.
ಆದರೆ, ಇದೀಗ ಇಂಗಳಿ ಚಲೋ ಪ್ರತಿಭಟನೆಗೆ ಇಂಗಳಿ ಗ್ರಾಮಸ್ಥರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದ ಜನರು ಈ ಕರಿತು ಸಭೆ, ಬಳಿಕ ನಮ್ಮ ಗ್ರಾಮದಲ್ಲಿ ಎಲ್ಲ ಜಾತಿ ಧರ್ಮದವರು ಒಗ್ಗಟ್ಟಾಗಿ ಇದ್ದೇವೆ. ಹೊರಗಿನವರು ನಮ್ಮ ಗ್ರಾಮಕ್ಕೆ ಬರುವುದು ಬೇಡ. ಈ ಬಗ್ಗೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.