ಬಾಲಿವುಡ್ ನ ಖ್ಯಾತ ಹಿರಿಯ ನಟ ಅನಿಲ್ ಕಪೂರ್ ಗೆ ಮಾತೃವಿಯೋಗವಾಗಿದೆ.
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಮಲಾ ಕಪೂರ್ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ನಿರ್ಮಾಲಾ ಅವರನ್ನು ಮುಂಬೈನ ಕೋಕಿಲಾ ಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ, ಚಿಕಿತ್ಸೆ ಫಲಿಸದೆ 90 ವರ್ಷದ ನಿರ್ಮಲಾ ಕೊನೆಯುಸಿರೆಳೆದಿದ್ದಾರೆ. ನಿರ್ಮಲಾ ಅವರ ಹಿರಿಯ ಪುತ್ರ ಬೋನಿ ಕಪೂರ್ ಕೂಡಾ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ನಿರ್ಮಲಾರ ಸಾವಿಗೆ ಸಮಸ್ತ ಬಾಲಿವುಡ್ ಕಂಬನಿ ಮಿಡಿದಿದ್ದು, ನಟಿಯರಾದ ಅನನ್ಯಾ ಪಾಂಡೆ, ರಾಣಿ ಮುಖರ್ಜಿ, ಸುಹಾನಾ ಖಾನ್, ಜಾಕಿ ಶಾರ್ಫ್, ರವೀನಾ ಟಂಡನ್ ಸೇರಿ ಹಲವರು ಪಾರ್ಥೀವ ಶರೀರದ ದರ್ಶನ ಪಡೆದಿದ್ದಾರೆ.