ಬೆಂಗಳೂರು: ಕೆ.ಜಿ.ಎಫ್, ಸಲಾರ್, ಭೈರತಿ ರಣಗಲ್, ಉಗ್ರಂ ನಂಥಹ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರು ನಿರ್ದೇಶದನದ ಯಕ್ಷಗಾನ ಕಲೆಯ ಸಾರ ಹೊಂದಿರುವ ಚಿತ್ರ, ಯಕ್ಷಗಾನ ಪ್ರಸಂಗ ಆಧಾರಿತ “ವೀರ ಚಂದ್ರಹಾಸ” ಇಂದು ತೆರೆಗೆ ಅಪ್ಪಳಿಸಿದೆ.
ಎಸ್.ಎಸ್. ರಾಜಕುಮಾರ್ ನಿರ್ಮಾಣದ, ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಅರ್ಪಿಸುತ್ತಿರುವ ಈ ಚಿತ್ರದ ಮೂಲಕ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ, ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ಬೆಳ್ಳಿ ಪರದೆಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಈ ಚಿತ್ರದಲ್ಲಿ 400 ರಿಂದ 500 ಯಕ್ಷಗಾನ ಕಲಾವಿದರು ಅಭಿನಯಿಸಿದ್ದಾರೆ. 8 ರಿಂದ 10 ಕೋಟಿ ಬಜೆಟ್ ನಲ್ಲಿ ಹೆಬ್ಬಾಳದ ಬಳಿ ಒಂದು ಗ್ರೌಂಡ್ ನಲ್ಲಿ ಬೇರೆ ಬೇರೆ ಸೆಟ್ ಹಾಕಿ 35 ರಿಂದ 40 ದಿನ ಈ ಚಿತ್ರದ ಶೂಟಿಂಗ್ ನಡೆಸಲಾಗಿದೆ.
ಶಿವರಾಜಕುಮಾರ್ ಕೂಡ ಯಕ್ಷಗಾನದ ಕಾಸ್ಟ್ಯೂಮ್ ಧರಿಸಿದ್ದಾರೆ. ಈ ಚಿತ್ರ ಇಂದು 50ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಅವಧಿ 2 ಗಂಟೆ 36 ನಿಮಿಷ ಇದೆ. ಹಾಡುಗಳು ಬಿಟ್ ಥರ ಇವೆ. ಎಲ್ಲಾ ಸರ್ಕಾರಿ ಶಾಲೆ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಅವಕಾಶ ಕೊಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗಿದೆ.