ಬೆಂಗಳೂರು: ಬರವಣಿಗೆ ತುಂಬ ಜನರ ಹವ್ಯಾಸವಾಗಿರುತ್ತದೆ. ಅದರಲ್ಲೂ, ಬರೆಯಲು ಹತ್ತಾರು ಕಥೆಗಳಿರುತ್ತವೆ. ಆದರೆ, ಅವುಗಳನ್ನು ಪ್ರಕಟಿಸಲು, ಕಥೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ವೇದಿಕೆಗಳು ಇರೋದಿಲ್ಲ. ಆದರೆ, ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದು, ಕತೆ ಬರೆಯುವವರಿಗೆ ವೇದಿಕೆ ಕಲ್ಪಿಸಿದೆ. ಹಾಗೆಯೇ, ಅತ್ಯುತ್ತಮ ಕತೆಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂಪಾಯಿಯನ್ನೂ ಘೋಷಿಸಿದೆ.
ಹೌದು, ಉತ್ಥಾನ ಮಾಸಪತ್ರಿಕೆಯು ಕಳೆದ 5 ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2025ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಕಥೆಯು 3 ಸಾವಿರ ಪದಗಳ ಮಿತಿಯಲ್ಲಿ ಇರಬೇಕು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು. ಕಥೆ ತಲುಪಲು ಅ.10, 2025 ಕೊನೆಯ ದಿನಾಂಕವಾಗಿದೆ.
ಆಯ್ಕೆಯಾದ ಕಥೆಗಳಿಗೆ ಮೊದಲನೆಯ ಬಹುಮಾನವಾಗಿ 15 ಸಾವಿರ ರೂಪಾಯಿ, ಎರಡನೇ ಬಹುಮಾನವಾಗಿ 12 ಸಾವಿರ ರೂಪಾಯಿ ಮತ್ತು, ಮೂರನೇ ಬಹುಮಾವಾಗಿ 10 ಸಾವಿರ ರೂಪಾಯಿ ನೀಡಲಾಗುತ್ತದೆ. ಇದರ ಜತೆಗೆ, ಐದು ಮೆಚ್ಚುಗೆಯ ಪಡೆದ ಕಥೆಗಳಿಗೆ ತಲಾ 2 ಸಾವಿರ ರೂಪಾಯಿ ನೀಡಲಾಗುತ್ತದೆ.
ಸ್ಪರ್ಧೆಯ ನಿಯಮಗಳು
ಕಥೆ 3 ಸಾವಿರ ಪದಗಳ ಮಿತಿಯಲ್ಲಿ ಇರಬೇಕು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
ಕಥೆಯನ್ನು ಪೋಸ್ಟ್ ಮೂಲಕ ಅಥವಾ ನುಡಿ/ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ-ಮೇಲ್ ಮೂಲಕ ಕಳುಹಿಸಬಹುದು. ಇ-ಮೇಲ್ ವಿಳಾಸ: utthanakathaspardhe@gmail.com
ಲೇಖಕರು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜತೆಗೆ ಲೇಖಕರ ಭಾವಚಿತ್ರವೂ ಇರಬೇಕು.
ಕಥೆ ಕಳುಹಿಸಬೇಕಾದ ವಿಳಾಸ
ಸಂಪಾದಕರು ‘ಉತ್ಥಾನʼ ವಾರ್ಷಿಕ ಕಥಾ ಸ್ಪರ್ಧೆ– 2025, ‘ಕೇಶವ ಶಿಲ್ಪʼ, ಕೆಂಪೇಗೌಡ ನಗರ, ಬೆಂಗಳೂರು-04 ದೂರವಾಣಿ: 7795441894 ಇ-ಮೇಲ್ ವಿಳಾಸ: utthanakathaspardhe@gmail.com
ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ʼಉತ್ಥಾನʼ ದ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.