ಬೆಂಗಳೂರಿಗೆ: ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ಗಳಿಗೆ ಟಕ್ಕರ್ ಕೊಡಲು ಉಬರ್(Uber) ಖಾಸಗಿ ಕಂಪನಿ ಮುಂದಾಗಿದೆ. ಕೆಲವು ಪ್ರದೇಶಗಳಿಗೆ ಖಾಸಗಿಯಾಗಿ ಬಸ್ ಓಡಿಸಲು ಉಬರ್ ಮುಂದಾಗಿದೆ. ಹೀಗಾಗಿ ನಗರದ ಹೊರ ವಲಯಗಳಲ್ಲಿ ಈಗಾಗಲೇ ಟೆಸ್ಟ್ ಡ್ರೈವ್(Test drive) ಆರಂಭಿಸಲಾಗಿದೆ.
ಮಹಾದೇವಪುರ, ಸರ್ಜಾಪುರ, ವೈಟ್ ಫೀಲ್ಡ್(White Field) ಪ್ರದೇಶಗಳಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಸಂಚಾರ ಆರಂಭವಾಗಿದೆ. ಕೆಲವೆಡೆ ಈಗಾಗಲೇ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಆದರೆ, ಉಬರ್ ಷಟಲ್ ಬಸ್ ಗೆ ವಿರೋಧ ವ್ಯಕ್ತವಾಗುತ್ತಿದೆ. ಐಟಿ ಕಾರಿಡಾರ್(IT Corridor) ನಲ್ಲಿ ಉಬರ್ ಷಟಲ್ ಬಸ್ ಸೇವೆ(Uber shuttle bus service) ಆರಂಭಿಸಿದೆ. ಆದರೆ, ಮೋಟರ್ ಆ್ಯಕ್ಟ್ ನಡಿ ಹೀಗೆ ಚಲಾಯಿಸಲು ಅವಕಾಶ ಇಲ್ಲ. ಕಾನೂನು ನಿಯಮವನ್ನು ಗಾಳಿಗೆ ತೂರಿ ಬಸ್ ಚಲಾಯಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಇದು ಆ್ಯಕ್ಟ್ ಉಲ್ಲಂಘನೆ ಎಂದು ಖಾಸಗಿ ಸಾರಿಗೆಗಳ ಒಕ್ಕೂಟದಿಂದ ಸಾರಿಗೆ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಖಾಸಗಿ ವಾಹನಗಳ ಮಾಲೀಕರ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ (Nataraj Sharma) ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ.
ಕಂಪನಿ ಸೇವೆಗಳಿಗೆ ಸೇವೆ ಕೊಡಲು ಅವರರದ್ದೇ ಆದ ವಾಹನ ಇದೆ. ಉಬರ್ ಶಟಲ್ ಕಾನೂನನಡಿ ಮಾನ್ಯತೆ ಇಲ್ಲ. 15 ದಿನಗಳ ಹಿಂದೆ ಟಸ್ಟಿಂಗ್ ಮಾಡಿದ್ದಾರೆ. ಕೂಡಲೇ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಖಾಸಗಿ ಸಾರಿಗೆ ಬಸ್ ಮಾಲೀಕರು ಮನವಿ ಮಾಡಿದ್ದಾರೆ. ಕೂಡಲೇ ಉಬರ್ ವಾಹನಗಳನ್ನು ಸೀಜ್ ಮಾಡುತ್ತೇವೆಂದು ಇಲಾಖೆ ಆಯುಕ್ತರು ಭರವಸೆ ನೀಡಿದ್ದಾರೆ.