ಬಳ್ಳಾರಿ: ಇಂದು ಸಂಸದ ಇ.ತುಕಾರಾಂ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮನೆ ಹಾಗೂ ಸಂಬಂಧಿಸಿದ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿ, ಹಲವಾರು ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ ಮಧ್ಯೆ ತುಕಾರಂ ಸಂಜೆ ವೇಳೆ ಪ್ರತ್ಯಕ್ಷರಾಗಿದ್ದಾರೆ.
ಸಂಜೆ ಪ್ರತ್ಯಕ್ಷರಾದ ಅವರು ಇಡಿ ದಾಳಿಯ ವಿಚಾರ ಮರೆತು ಮೊಮ್ಮಗಳೊಂದಿಗೆ ಆಟವಾಡಿ ಸಂತಸ ಪಟ್ಟಿದ್ದಾರೆ. ಮೊಮ್ಮಗಳು ಬರುತ್ತಿದ್ದಂತೆ ಖುಷಿಯಿಂದ ಎತ್ತಿಕೊಂಡ ಸಂಸದರು ಮುದ್ದಾಡಿದ್ದಾರೆ. ಇಂದು ಸಂಸದ ತುಕಾರಂ ನಿವಾಸದ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ತಂದೆ, ತಾಯಿಯನ್ನು ಮಗಳು ನೋಡಲು ಬಂದಿದ್ದಾಳೆ. ಈ ವೇಳೆ ಮೊಮ್ಮಗಳನ್ನು ಎತ್ತಿಕೊಂಡು ಸಂಸದ ತುಕಾರಾಂ, ಪತ್ನಿ ಶಾಸಕಿ ಅನ್ನಪೂರ್ಣ ತುಕಾರಾಂ ಖುಷಿ ಪಟ್ಟಿದ್ದಾರೆ.