ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹೊಸ ಸುಂಕ ನೀತಿ ನಿಜಕ್ಕೂ ಮೊಬೈಲ್ ದೈತ್ಯ ಆಪಲ್ ನ್ನು ಇನ್ನಿಲ್ಲದಂತೆ ನಿದ್ದೆಗೆಡಿಸಿದೆ. ತೆರಿಗೆ ಯುದ್ಧದಿಂದ ಪಾರಾಗಲು ಆಪಲ್ ಶತಾಯಗತಾಯ ಹೋರಾಟ ನಡೆಸಿದೆ.
ಆಮದು ಸುಂಕ ಹೆಚ್ಚಳ ಅಸ್ತ್ರದಿಂದ ಪಾರಾಗಲು ಆಪಲ್ ಸಮರೋಪಾದಿಯಲ್ಲಿ ಕಾರ್ಯಚರಣೆ ನಡೆಸುತ್ತಿರುವುದು ಬಯಲಾಗಿದೆ. ಸುಂಕ ಚಕ್ರವ್ಯೂಹದಿಂದ ಪಾರಾಗಲು ಆಪಲ್ ಭಾರತದಿಂದ 600 ಟನ್ ಗೂ ಹೆಚ್ಚು ಸರಕನ್ನು ರಾತ್ರೋ ರಾತ್ರಿ ಏರ್ ಲಿಫ್ಟ್ ಮಾಡಿದೆ. ವಿಶ್ವದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಅಲ್ಪಾವಧಿಯಲ್ಲಿ ಈ ಮಟ್ಟದ ಸರಕು ಸರಬರಾಜು ಮೊದಲು ಎನ್ನಲಾಗುತ್ತಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ ಸಮೀಪದ ತನ್ನ ಉತ್ಪಾದನಾ ಘಟಕದಿಂದ ಆಪಲ್ ಇಲ್ಲಿಯವರೆಗೂ ಬರೋಬ್ಬರಿ 15 ಆಪಲ್ ಫೋನ್ ಗಳನ್ನು ಅಮೆರಿಕಗೆ ಸಾಗಿಸಿದೆ.
ಚಾರ್ಜರ್ ಸೇರಿದಂತೆ ಪ್ರತಿ ಆಪಲ್ 14 ಮಾಡೆಲ್ ನ ಪೋನಿನ ತೂಕ 350 ಗ್ರಾಂವರೆಗೂ ಇರುತ್ತದೆ. ಇಂತಹ 350 ಗ್ರಾಂ ಲೆಕ್ಕದಂತೆ ಇಲ್ಲಿಯವರೆಗೂ 600 ಟನ್ ಸರಕನ್ನು ಸ್ಥಳಾಂತರಿಸಲಾಗಿದೆ. ಅಷ್ಟೇ ಅಲ್ಲಾ ಸಹಜವಾಗಿ ವಿದೇಶಕ್ಕೆ ರಫ್ತಾಗುವ ಕಾರ್ಗೋಗಳ ಕ್ಲಿಯರೆನ್ಸ್ ಗೆ ಸಹಜವಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 30 ಗಂಟೆ ಬೇಕಾಗುತ್ತದೆ. ಆದರೆ, ವಿಮಾನ ನಿಲ್ದಾಣ ಆಡಳಿತ ಮಂಡಳಿ ಜೊತೆ ಒಪ್ಪಂದ ಮಾಡಿಕೊಂಡಿರುವ ಆಪಲ್, ಕೇವಲ 6 ಗಂಟೆಯಲ್ಲಿ ಗ್ರೀನ್ ಸಿಗ್ನಲ್ ಪಡೆದಿದೆ. ಅಮೆರಿಕಗೆ ರಪ್ತು ಮಾಡಲು ಗ್ರೀನ್ ಕಾರಿಡಾರ್ ಹೆಸರಲ್ಲಿ ಏರ್ ಲಿಫ್ಟ್ ಮಾಡಲಾಗಿದೆ.