ಇತ್ತೀಚೆಗೆ ಸೀರಿಯಲ್ ಪ್ರಿಯರೇ ಹೆಚ್ಚಾಗಿದ್ದಾರೆ. ಸಂಜೆ ಆಯಿತೆಂದರೆ ಸಾಕು ಪ್ರತಿಯೊಬ್ಬರು ಟಿವಿ ಮುಂದೆ ಹಾಜರಾಗಿ ಧಾರಾವಾಹಿ ನೋಡುತ್ತ ಕುಳಿತುಕೊಳ್ಳುತ್ತಾರೆ. ಎಷ್ಟು ಜನರ ಮನೆಯಲ್ಲಿ ಧಾರಾವಾಹಿ ಮುಗಿಯುವವರೆಗೂ ಗಂಡಸಿಗೆ ಟಿವಿ ರಿಮೋಟ್ ಕೂಡ ಸಿಗುವುದಿಲ್ಲ. ಈ ಮಧ್ಯೆ ಪ್ರತಿಯೊಂದು ಮನೆಯಲ್ಲೂ ಸೀರಿಯಲ್ ಪ್ರಿಯರು ಇದ್ದೇ ಇರುತ್ತಾರೆ. ಆದರೆ, ಈಗ ಐಪಿಎಲ್ ಹಂಗಾಮಾ ಶುರುವಾಗಿದ್ದು, ಧಾರಾವಾಹಿಗೆ ಟಿಆರ್ ಪಿಗೆ ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ.
ಹೌದು ಸೀರಿಯಲ್ ಪ್ರಿಯರಿಗಿಂತ ಹೆಚ್ಚಾಗಿ ಕ್ರಿಕೆಟ್ ಪ್ರಿಯರು ನಮ್ಮ ದೇಶದಲ್ಲಿದ್ದಾರೆ. ಹೀಗಾಗಿ ಐಪಿಎಲ್ ನಡೆಯುತ್ತಿರುವುದರಿಂದ ಧಾರಾವಾಹಿಗಳ ಟಿಆರ್ಪಿಯಲ್ಲಿ ಭಾರಿ ಇಳಿಕೆ ಕಂಡಿದೆ. ಪ್ರತಿನಿತ್ಯ ಸಂಜೆ 7 ಗಂಟೆಗೆ ಐಪಿಎಲ್ ಮ್ಯಾಚ್ನ ಟಾಸ್ ನಡೆಯುತ್ತದೆ. 7.30ಕ್ಕೆ ಪಂದ್ಯ ಆರಂಭವಾಗುತ್ತದೆ. ಬಹುತೇಕ ಪ್ರಮುಖ ಧಾರಾವಾಹಿಗಳು ಪ್ರಸಾರ ಆರಂಭವಾಗುವುದು ಸಂಜೆ 7ಕ್ಕೆ. ಐಪಿಎಲ್ ಕಾರಣದಿಂದ ಧಾರಾವಾಹಿಗಳ ಟಿಆರ್ಪಿಗೆ ಸಾಕಷ್ಟು ಹೊಡೆತ ಬಿದ್ದಿದೆ ಎನ್ನಲಾಗುತ್ತಿದೆ.
ಅನೇಕರು ಐಪಿಎಲ್ ವೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಧಾರಾವಾಹಿಗಳ ಟಿಆರ್ಪಿ ಕುಸಿದೇ ಹೋಗಿದೆ. ಈ ಬಾರಿ 7.3 ಟಿವಿಆರ್ ಗರಿಷ್ಠ ಎನಿಸಿಕೊಂಡಿದೆ. ಇದಕ್ಕೆ ಐಪಿಎಲ್ ನೇರ ಕಾರಣ ಎಂಬ ಮಾತುಗಳು ವ್ಯಕ್ತವಾಗಿದೆ.