ಕಾರವಾರ: ಸಾರಿಗೆ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಶರಾವತಿ ಸೇತುವೆ ಹತ್ತಿರ ನಡೆದಿದೆ. ಭಟ್ಕಳ ತಾಲೂಕಿನ ರಾಘವೇಂದ್ರ ಸೋಮಯ್ಯ ಗೌಡ (34), ಗೌರೀಶ್ ನಾಯ್ಕ್ (25), ರಮೇಶ್ ನಾಯ್ಕ್ (22) ಸಾವನ್ನಪ್ಪಿರುವ ದುರ್ದೈವಿಗಳು ಎನ್ನಲಾಗಿದೆ.
ವಿಜಯಪುರದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ಗೆ ಭಟ್ಕಳ ಭಾಗದಿಂದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಅತೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.