ಬೆಂಗಳೂರು: ನಿರೀಕ್ಷೆಯಂತೆಯೇ ಜೂನ್ 1ರಿಂದ ಹಲವು ಹಣಕಾಸು ನಿಯಮಗಳಲ್ಲಿ ಬದಲಾವಣೆಯಾಗುತ್ತಿವೆ. ಕೆಲವು ನಿಯಮಗಳು ಗ್ರಾಹಕರ ಜೇಬಿಗೆ ಹೊರೆಯಾದರೆ, ಇನ್ನೂ ಕೆಲವು ನಿಯಮಗಳು ಅನುಕೂಲವಾಗುತ್ತವೆ. ಹಾಗಾದರೆ, ಜೂನ್ 1ರಿಂದ ಹಣಕಾಸಿಗೆ ಸಂಬಂಧಿಸಿದ ಯಾವೆಲ್ಲ ನಿಯಮಗಳು ಬದಲಾಗುತ್ತಿವೆ? ಇವು ಗ್ರಾಹಕರ ಮೇಲೆ ಬೀರುವ ಪರಿಣಾಮಗಳು ಏನು? ಇಲ್ಲಿವೆ ಪಾಯಿಂಟ್ಸ್.
- ಇಪಿಎಫ್ಒ 3.0 ಯೋಜನೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇದು ಜಾರಿಗೆ ಬಂದರೆ ಜನ ಎಟಿಎಂ ಹಾಗೂ ಯುಪಿಐ ಮೂಲಕವೇ ಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಬಹುದಾಗಿದೆ.
- ಕ್ರೆಡಿಟ್ ಕಾರ್ಡ್ ಗಳಲ್ಲಿ ಯಾವುದಾದರೂ ಬಿಲ್ ಆಟೋ ಡೆಬಿಟ್ ಗೆ ಸೆಟ್ ಮಾಡಿದವರು ಎಚ್ಚರದಿಂದ ಇರಬೇಕು. ಆಟೋ ಡೆಬಿಟ್ ಫೇಲ್ ಆದರೆ, ಜೂನ್ 1ರಿಂದ ಬಿಲ್ ಮೊತ್ತದ ಮೇಲೆ ಶೇ.2ರಷ್ಟು ದಂಡ ವಿಧಿಸಲಾಗುತ್ತದೆ.
- ಮ್ಯೂಚುವಲ್ ಫಂಡ್ ನೆಟ್ ಅಸೆಟ್ ವ್ಯಾಲ್ಯೂ (NAV) ಕಟ್ ಆಫ್ ಸಮಯವನ್ನು ಸೆಬಿ ಬದಲಿಸಿದ್ದು, ಜೂನ್ 1ರಿಂದ ಜಾರಿಗೆ ಬರಲಿದೆ. ಆಫ್ ಲೈನ್ ಎನ್ ಎವಿಯನ್ನು ಮಧ್ಯಾಹ್ನ 3 ಗಂಟೆ ಹಾಗೂ ಆನ್ ಲೈನ್ ಎನ್ ಎ ವಿ ಕಟ್ ಆಫ್ ಸಮಯವನ್ನು ಸಂಜೆ 7ಕ್ಕೆ ನಿಗದಿಪಡಿಸಲಾಗಿದೆ.
- ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ ಅಥವಾ ಏರಿಕೆ ಸಾಧ್ಯತೆ.
- ಜೂನ್ 4-6ರವರೆಗೆ ಆರ್ ಬಿ ಐ ಹಣಕಾಸು ನೀತಿ ಸಮಿತಿ ಸಭೆ, ರೆಪೋ ದರದಲ್ಲಿ ಇಳಿಕೆಯಾಗುವ ನಿರೀಕ್ಷೆ.