ಮೈಸೂರು: ಸಾರಿಗೆ ಬಸ್ ಟೈರ್ ಬ್ಲಾಸ್ಟ್ ಆದ ಪರಿಣಾಮ 10ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಡಿಯಾಲ ಹತ್ತಿರ ಈ ಘಟನೆ ನಡೆದಿದೆ. ಬೇಗೂರು ನಿಂದ ಹೆಡಿಯಾಲ ಮಾರ್ಗವಾಗಿ ಹೆಚ್.ಡಿ ಕೋಟೆಗೆ ತೆರಳುತ್ತಿದ್ದ ಬಸ್ ನ ಬಲ ಭಾಗದ ಟೈರ್ ಬ್ಲಾಸ್ಟ್ ಆಗಿದೆ. ಪರಿಣಾಮ ಬಲಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.