ದಾವಣಗೆರೆ : ಚಿಂದಿ ಆಯುವ ಮಹಿಳೆಯರಿಂದ ಹಾಡು ಹಗಲಲ್ಲೇ ಬೀಗ ಮುರಿದು ದರೋಡೆಗೆ ಯತ್ನಿಸಿರುವ ಘಟನೆ ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪ್ ಗ್ರಾಮದಲ್ಲಿ ನಡೆದಿದೆ.
ವೆಂಕಟೇಶ ಕ್ಯಾಂಪ್ ಗ್ರಾಮದ ಹಲ್ಲೂರಿ ವಿಶ್ವೇಶ್ವರ ರಾವ್, ಪದ್ಮಾವತಿ, ರೇಣುಕಮ್ಮ ಎನ್ನುವವರ ಮನೆಯ ಬೀಗ ಮುರಿದು ಕಳ್ಳತನ ಮಾಡಲು ಯತ್ನಿಸಿದ್ದಾರೆ ಮತ್ತು ಪದ್ಮಾವತಿ, ರೇಣುಕಮ್ಮ ಎನ್ನುವವರ ಮನೆಯಲ್ಲಿ ನೀರು ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ರಂಜಿತಾ, ಕಾವ್ಯ, ಗಿರಿಜಮ್ಮ ಬಂಧಿತ ಆರೋಪಿಗಳು.
ಚಿಂದಿ ಆಯುವ ನೆಪ ಮಾಡಿಕೊಂಡು ಬಂದು ಬೀಗ ಹಾಕಿದ ಮನೆಯನ್ನು ನೋಡಿಕೊಂಡು ಹೋಗಿ, ನಂತರ ತಮ್ಮ ಗಂಡಂದಿರೊಂದಿಗೆ ಬಂದು ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.