ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಇವತ್ತು ಅಕ್ಷರಶಃ ಸ್ಮಶಾನವಾಗಿ ಹೋಗಿವೆ. ಪಾಕಿಗಳ ಕಲ್ಪನೆಗೂ ಮೀರಿದ ಅಟ್ಟಹಾಸವನ್ನು ಅವರ ಮನೆಗೇ ನುಗ್ಗಿ ಭಾರತ ತೋರಿದೆ. ಹಾಗಂತಾ ಇದು 1971ರ ಸಮರವಾಗಿರಲಿಲ್ಲ. 21ನೇ ಶತಮಾನದ ರಣರಕ್ಕಸ ರಣನೀತಿ ರೂಪಿಸಿದ್ದ ಭಾರತ, ಪಾಕಿಸ್ತಾನದ ಸಂಹಾರಕ್ಕೆ ತನ್ನ ಬತ್ತಳಿಕೆಯಲ್ಲಿದ್ದ ಬ್ರಹ್ಮಾಸ್ತ್ರ ಅದೇ ಬ್ರಹ್ಮೋಸ್ ಪ್ರಯೋಗಿಸಿತ್ತು. ನೋಡ ನೋಡುತ್ತಿದ್ದಂತೆ ಭಾರತದ ಸ್ವದೇಶಿ ಅಸ್ತ್ರ ಪಾಕಿಸ್ತಾನವನ್ನು ನಿರ್ನಾಮ ಮಾಡಿ ಮುಗಿಸಿದೆ.
ಡಿಆರ್ ಡಿಒ ನಿರ್ಮಿತ ಸ್ವದೇಶಿ ಅಸ್ತ್ರ ಬ್ರಹ್ಮೋಸ್
ಪಿಒಕೆಯ ಜೈಶ್, ಲಷ್ಕರ್ ಉಗ್ರರ ಠಿಕಾಣಿಗಳನ್ನು ಚಿಂದಿ ಮಾಡಿದ್ದೇ ಈ ಬ್ರಹ್ಮೋಸ್. ಭಾರತದ ನೆಲೆಯಿಂದ ಬಾನಿಗೆ ನೆಗೆದ ಈ ಖಂಡಾಂತರ ಕ್ಷಿಪಣಿ, ಐವರು ಮೋಸ್ಟ್ ವಾಂಟೆಡ್ ಅತ್ಯುಗ್ರರನ್ನು ಸೇರಿದಂತೆ 100ಕ್ಕೂ ಹೆಚ್ಚು ಪರಮಪಾಪಿಗಳ ರಕ್ತ ಹೀರಿದೆ. ಹಾಗಂತಾ ಈ ಬ್ರಹ್ಮೋಸ್ ಶಬ್ಧಕ್ಕಿಂತಾ 2.8 ಪಟ್ಟು ಹೆಚ್ಚು ವೇಗದಲ್ಲಿ ಸಾಗಬಲ್ಲ ಶಕ್ತಿಶಾಲಿ. ಒಮ್ಮೆ ಗುರಿಯಿಟ್ಟರೆ ಹುಡುಕಿಕೊಂಡು ಹೋಗಿ ಹೊಡೆಯುವ ತಾಕತ್ತು ಹೊಂದಿದೆ. ಹಾಗಂತಾ ಯಾವ ರಡಾರ್ ಗೂ ಈ ಬ್ರಹ್ಮೋಸ್ ಪತ್ತೆ ಹಚ್ಚುವ ತಾಕತ್ತಿಲ್ಲ. ಇಂತಹ ಅಸ್ತ್ರವನ್ನು ಹೂಡಿಯೇ ಪಾಕಿಸ್ತಾನವನ್ನು ಬೂದಿ ಮಾಡಲಾಗಿದೆ.
ರಷ್ಯಾ-ಭಾರತದ ನದಿಗಳ ಹೆಸರಿನ ಸಂಗಮವೇ ಬ್ರಹ್ಮೋಸ್
ಭಾರತದ ಡಿಆರ್ ಡಿಒ ನ ಕನಸಿನ ಕೂಸು ಈ ಬ್ರಹ್ಮೋಸ್. 2001ರಲ್ಲಿ ಮೊದಲ ಬಾರಿ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. 2005ರಲ್ಲಿ ಇದನ್ನು ಅಧಿಕೃತವಾಗಿ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಜೈಶ್, ಲಷ್ಕರ್ ಎ ತೋಯ್ಬಾ ಸೇರಿದೆಂತೆ ಪಾಕಿಸ್ತಾನದ 8 ವಾಯುನೆಲಗಳನ್ನು ಧೂಳೀಪಟ ಮಾಡಿದ ಬ್ರಹ್ಮೋಸ್ ತಯಾರಿಯಲ್ಲಿ ರಷ್ಯಾದ ಕೊಡುಗೆಯೂ ಅಪಾರ. ಹೀಗಾಗಿಯೇ ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮಾಸ್ಕೋವಾ ನದಿಗಳ ಹೆಸರನ್ನೇ ಸಂಗಮವಾಗಿಸಿ ಈ ಬಲಭೀಮ ಅಸ್ತ್ರಕ್ಕೆ ಬ್ರಹ್ಮೋಸ್ ಅಂತಾ ನಾಮಕರಣ ಮಾಡಲಾಗಿದೆ. 290ರಿಂದ 800 ಕಿಲೋಮೀಟರ್ ದೂರದ ಗುರಿಯನ್ನೂ ಯಸಸ್ವಿಯಾಗಿ ಉಡಾಯಿಸುವ ತಾಕತ್ತು ಬ್ರಹ್ಮೋಸ್ ಗಿದೆ.
ಈ ನಡುವೆ ಬ್ರಹ್ಮೋಸ್ ಶಕ್ತಿ ಜಗತ್ತಿಗೆ ಗೊತ್ತಾದ ಬೆನ್ನಲ್ಲೇ ಲಖನೌದಲ್ಲಿ ನಿನ್ನೆಯಷ್ಟೇ ನೂತನ ಉತ್ಪಾದನಾ ಘಟಕವನ್ನು ಕಾರ್ಯಾರಂಭಿಸಲಾಗಿದೆ. 80 ಹೆಕ್ಟೇರ್ ವಿಸ್ತೀರ್ಣದಲ್ಲಿ ಈ ಘಟಕ ಕಾರ್ಯಾರಂಭಿಸಿದ್ದು, ವಾರ್ಷಿಕ 150 ಕ್ಷಿಪಣಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಭಾರತೀಯ ಸೇನೆಯ ಬತ್ತಳಿಕೆಯಲ್ಲಿರುವ ಈ ಬ್ರಹ್ಮೋಸ್ ತನ್ನ ಪರಾಕ್ರಮವನ್ನು ಸಾಬೀತು ಮಾಡಿದ್ದು, ವಿಶ್ವ ರಕ್ಷಣಾ ವಲಯದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ನೂರ್ಪಟ್ಟುಗೊಳಿಸಿದೆ.