ಇತ್ತೀಚೆಗೆ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಷ್ಟು ದಿನ ಚಿನ್ನ ಬೆಳ್ಳಿ ಬೈಕ್ ಕಾರುಗಳನ್ನು ಕದಿಯುತ್ತಿದ್ದ ಕಳ್ಳರು ಇದೀಗ ಬೈಕ್ ಮೇಲೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಎಕ್ಸ್ ಎಲ್ ಬೈಕ್ ನಲ್ಲಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಕದ್ದಿರುವ ಘಟನೆ, ನಂದಿನಿ ಲೇಔಟ್ ನ ಪ್ರೀತಿ ನಗರದಲ್ಲಿ ನಡೆದಿದೆ. ಇಲ್ಲೊಬ್ಬ ವ್ಯಕ್ತಿ ಎಕ್ಸ್ ಎಲ್ ಗಾಡಿಯಲ್ಲಿ ಸಿಲಿಂಡರ್ ಡೆಲಿವರಿ ಮಾಡುತ್ತಿದ್ದ. ಆ ವೇಳೆ ಸ್ಕೂಟಿಯಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಬ್ಬ ರಾಜರೋಷವಾಗಿ ಗ್ಯಾಸ್ ಸಿಲಿಂಡರನ್ನು ಹೊತ್ತೊಯ್ದಿದ್ದಾನೆ. ಸದ್ಯ ಸಿಲಿಂಡರ್ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ..