ಒತ್ತಾಯಪೂರ್ವಕವಾಗಿ ಜಾತಿ ಜನಗಣತಿ ಜಾರಿಗೆ ತರಲು ಮುಂದಾದರೆ ರಾಜ್ಯದಲ್ಲಿ ರಕ್ತ ಕ್ರಾಂತಿ ಆಗುತ್ತದೆ. ಅಲ್ಲದೇ, ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದಿರುವ ಜಾತಿ ಗಣಿತಿ ಅವೈಜ್ಞಾನಿಕವಾಗಿದೆ. ರಾಜ್ಯ ಸರ್ಕಾರ ಮನಸ್ಸಿಗೆ ಬಂದಂತೆ ಜನಗಣತಿ ಮಾಡಿದೆ. ಜಾತಿ ಜನಗಣತಿ ಮನೆ ಮನೆಗೆ ಹೋಗಿ ಮಾಡಿಲ್ಲ. 65 ಕೋಟಿ ಹಣ ಸದ್ವಿನಿಯೋಗವಾಗಿಲ್ಲ. ಇದನ್ನು ಖಂಡಿತ ನಾವು ವಿರೋಧಿಸುತ್ತೇವೆ ಎಂದಿದ್ದಾರೆ.
ಜಾತಿ ಗಣತಿಯಲ್ಲಿ ಲಿಂಗಾಯತ ಸಂಖ್ಯೆಯನ್ನ ಕಡಿಮೆ ತೋರಿಸಲಾಗಿದೆ. ಇದು ಸಮಾಜವನ್ನು ಇಬ್ಭಾಗ ಮಾಡುವ ಹುನ್ನಾರ. ಲಿಂಗಾಯತರನ್ನು ಎರಡು ಭಾಗ ಮಾಡುವುದು ಮಹಾ ಅಪರಾಧ. ಇಂತಹ ವಿಷಯದಲ್ಲಿ ಸಮಾಜದಿಂದ ಮಠಾಧೀಶರಾದವರು ನೇತೃತ್ವ ವಹಿಸಿಕೊಂಡು ಹೋರಾಟಕ್ಕೆ ಇಳಿಯಬೇಕು. ಶಾಮನೂರು ಶಿವಶಂಕರಪ್ಪ ಸಭೆ ಕರೆದರೆ ಆ ಸಭೆಗೆ ಹೋಗುತ್ತೇನೆ ಎಂದಿದ್ದಾರೆ.