ಸಿಎಂ ಬದಲಾವಣೆ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆಯೇ ಆಗಿಲ್ಲ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಇನ್ನು ಕೆಲ ಶಾಸಕರು ಸ್ವಾಭಾವಿಕವಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಅದು ನಾಯಕರ ಬಗ್ಗೆ ಅವರಿಗಿರೋ ಪ್ರೀತಿ. ಸಹಜವಾಗಿ ಸರ್ಕಾರ ಬಂದು ಎರಡೂವರೆ ವರ್ಷವಾಗ್ತಿದೆ. ಹೀಗಾಗಿ ಕೆಲ ಗೊಂದಲಗಳು ಸಹಜ. ಆದ್ರೆ ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟವಾಗಿದೆ. ಇಂಥಾ ಯಾವ ಕಲ್ಪನೆಯೂ ಅವರಿಗಿಲ್ಲ.
ಇನ್ನು ಕಾಂಗ್ರೆಸ್ ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ, ಅವರ ನಿರ್ಧಾರಕ್ಕೆ ನಾನಾಗ್ಲಿ, ಡಿಕೆ ಶಿವಕುಮಾರ್ ಆಗ್ಲಿ ಇಬ್ರೂ ಬದ್ಧರಾಗಿರಬೇಕು. ನಾನೇ ಐದು ವರ್ಷ ಸಿಎಂ ಆಗಿರ್ತೀನಿ. ಇನ್ನು ಯಾರೇ ಈ ಬಗ್ಗೆ ಹೇಳಿಕೆ ಕೊಟ್ರೂ ಅದು ಅವರ ವಯಕ್ತಿಕ ಅಭಿಪ್ರಾಯ ಅಂತಾ ಸಿಎಂ ಸ್ಪಷ್ಟಪಡಿಸಿದ್ದಾರೆ.