ನಟಿ ರನ್ಯಾ ರಾವ್ ಅವರ ಬಳಿ ಸಿಕ್ಕಿರುವ ಚಿನ್ನದ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ. ಆಕೆಗೆ ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದೆ. ಆಕೆ ನಮ್ಮ ಜೊತೆಗೆ ಇಲ್ಲ. ಆಕೆ ತನ್ನ ಗಂಡನ ಮನೆಯಲ್ಲಿದ್ದಾಳೆ ಎಂದು ಡಿಜಿಪಿ ರಾಮಚಂದ್ರ ರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ರನ್ಯಾ ರಾವ್ ಅವರ ಗೋಲ್ಡ್ ಸ್ಮಗ್ಲಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೊಟ್ಟಿರುವ ರಾಮಚಂದ್ರ ರಾವ್, ಆಕೆಗೂ ನಮಗೂ ಸಂಬಂಧವೇ ಇಲ್ಲ ಎಂದಿದ್ದು, ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದಿದ್ದಾರೆ.