ಬೆಂಗಳೂರು: ನಾಗಮೋಹನ್ ದಾಸ್ ಆಯೋಗದ ಸುದೀರ್ಘ ಸಮೀಕ್ಷೆಯಲ್ಲಿ 27ಲಕ್ಷ ಕುಟುಂಬಗಳ ,1 ಕೋಟಿ 7 ಲಕ್ಷ ಜನರ ಸಮೀಕ್ಷೆ ಮಾಡಿ ವರದಿಯನ್ನುಇಂದು ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಿದೆ. ಮೊದಲು ವರದಿಯಲ್ಲಿ ಏನಿದೆ ಎನ್ನುವುದನ್ನು ನೋಡಿ ನಂತರ ಅದನ್ನು ಜಾರಿಗೆ ತರುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಪ್ರಿಯಾಂಕ್, ಬಿಜೆಪಿಯವರು ಆರೋಪ ಮಾಡುತ್ತಾರೆ. ಅವರು ಏನು ಮಾಡಿದರು ಎಂದು ಗೊತ್ತಿದೆಯಲ್ಲವೇ ? ಮಾಧುಸ್ವಾಮಿ ಮೂಲಕ ಏನು ಮಾಡಿಸಿದ್ದರೆನ್ನುವುದು ಗೊತ್ತಿರುವ ವಿಷಯ. ರಾಮನಿಗೊಂದು ಲೆಕ್ಕ ಕೃಷ್ಣನಿಗೊಂದು ಲೆಕ್ಕ ಮಾಡಿದ್ದರು. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಆದರೆ ನಾವು ಆ ರೀತಿ ಮಾಡಿಲ್ಲಾ, ಎಲ್ಲವನ್ನು ಕಾನೂನು ಬದ್ಧವಾಗಿಯೇ ಮಾಡುತ್ತೇವೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.
ಶಿಬು ಸೊರೇನ್ ನಿಧನ ಹೊಂದಿರುವ ಕಾರಣ ಪ್ರತಿಭಟನೆ ಮುಂದೂಡಿಕೆಯಾಗಿದೆ. ಇಲ್ಲವಾದರೆ ದಾಖಲೆ ಬಿಡುಗಡೆ ಮಾಡುತ್ತಿದ್ದರು. ಎಂದಾದರೂ ರಾಹುಲ್ ಇಲ್ಲಿ ಪ್ರತಿಭಟನೆ ಮಾಡುತ್ತಾರೆ. ನಿಮಗೆ ಏನು ದಾಖಲೆ ಬೇಕು ಕೊಡುತ್ತಾರೆ. ನಾವು ಪುರಾವೆ ಇಟ್ಟುಕೊಂಡೆ ನಿಮ್ಮ ಮುಂದೆ ಬರುತ್ತೇವೆ. ಮತಗಳವು ಹೇಗೆ ಆಗಿದೆ ಎನ್ನುವುದಕ್ಕೆ ಸಾಕ್ಷಿಗಳಿವೆ. ಕಾನೂನು ಮೂಲಕವೆ ಸಾಬೀತು ಮಾಡುತ್ತೇವೆ. ಸುಮ್ಮನೆ ಪ್ರತಿಭಟನೆ ಮಾಡಿದರೆ ಪ್ರಯೋಜನವೇನು? ದಾಖಲೆ ಇರುವುದರಿಂದಲೇ ಪ್ರತಿಭಟನೆ ಮಾಡುತ್ತಿರುವುದು ಎಂದು ಹೇಳಿದ್ದಾರೆ.
ನಾನು ಚುನಾವಣೆ ಆಯೋಗಕ್ಕೆ ದೂರು ಕೊಟ್ಟಿದ್ದೆ. ಇನ್ನೂ, ಆಯೋಗ ಉತ್ತರ ಕೊಟ್ಟಿಲ್ಲ ಜಗತ್ತಿನಲ್ಲಿ ತಾಂತ್ರಿಕತೆಯಲ್ಲಿ 4ನೇ ಸ್ಥಾನ ನಮ್ಮದು. ಯಾಕೆ ನಮ್ಮ ಪ್ರಶ್ನೆಗೆ ಉತ್ತರ ಕೊಡುತ್ತಿಲ್ಲ ಎನ್ನುವುದು ನನ್ನ ಪ್ರಶ್ನೆಯಾಗಿದೆ ಎಂದು ಚುನಾವಣೆ ಆಯೋಗದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.