ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿದ್ದರೂ 10 ನಿಮಿಷ ಕೂಡ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಸಿಕ್ಕಿಲ್ಲ. ಅವರಿಬ್ಬರು ಬರಿಗೈಯಲ್ಲಿ ಬಂದಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಮಾತನಾಡಿದ ಅವರು, ಸಿಎಂ ಮತ್ತು ಹೈಕಮಾಂಡ್ ಸಂಬಂಧ ಹಳಸಿದೆ. ಸರ್ಕಾರದ ಮೇಲೆ ಮೋಡದ ಕವಿದ ವಾತಾವರಣವಿದೆ. ಯಾವಾಗ ಗುಡುಗು, ಸಿಡಿಲಿನ ಮಳೆ ಅರಂಭವಾಗುತ್ತೋ? ಕಾಂಗ್ರೆಸ್ ಮತ್ತು ಸರ್ಕಾರದ ಮಧ್ಯೆ ಏನೂ ಸರಿ ಇಲ್ಲ. ಸಿಎಂ, ಡಿಸಿಎಂ ಹಗ್ಗ ಜಗ್ಗಾಟದಲ್ಲಿ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.