ಬೆಂಗಳೂರು: ಇತ್ತೀಚೆಗಷ್ಟೇ ಪೊಲೀಸ(Police)ರ ಎಡವಟ್ಟಿನಿಂದಾಗಿ ಅಪಘಾತವೊಂದು ಸಂಭವಿಸಿ, ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಮಾಸುವ ಮುನ್ನವೇ ಪೊಲೀಸರಿಗೆ ಹೊಸ ನಿಯಮ ಜಾರಿಗೆ ತರಲಾಗಿದೆ.
ಮಂಡ್ಯ (Mandya) ಜಿಲ್ಲೆಯಲ್ಲಿ ಈ ಘಟನೆ ನಡೆದಿತ್ತು. ಹೀಗಾಗಿ ಪೊಲೀಸ್ ಇಲಾಖೆ ವಾಹನ ತಪಾಸಣೆಗೆ ( Vhicle Inspection) ಹೊಸ ನಿಯಮ ಬಿಡುಗಡೆ ಮಾಡಲಾಗಿದೆ.
ಹೊಸ ನಿಯಮಗಳೇನು?
ಕಾರಣವಿಲ್ಲದೆ ವಾಹನ ತಡೆದು ತಪಾಸಣೆಗೆ ಒಳಪಡಿಸಬಾರದು
ಕಣ್ಣಿಗೆ ಕಾಣುವ (visible Violation) ಕಂಡುಬಂದಲ್ಲಿ ಮಾತ್ರವೇ ವಾಹನ ನಿಲ್ಲಿಸಬೇಕು.
ಹೆದ್ದಾರಿಯಲ್ಲಿ ಜಿಗ್ ಜ್ಯಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಡೆಯಬಾರದು
ದಿಢೀರನೆ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳಬಾರದು
ದ್ವಿಚಕ್ರವಾಹನದ ಹಿಂಬದಿ ಸವಾರರನ್ನು ಹಿಡಿದು ಎಳೆಯುವಂತಿಲ್ಲ
ವಾಹನಗಳ ಕೀ ಕಸಿದುಕೊಳ್ಳುವಂತಿಲ್ಲ
ವೇಗವಾಗಿ ಬರುವ ವಾಹನಗಳ ಬೆನ್ನಟ್ಟದೆ ನೊಂದಣಿ ಸಂಖ್ಯೆ ಗುರುತಿಸಿ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕು
ತಪಾಸಣೆ ವೇಳೆ ಪೊಲೀಸರು ರಿಫ್ಲೆಕ್ಟೀವ್ ಜಾಕೆಟ್ ಧರಿಸಿರಬೇಕು
ಸಂಜೆ ವೇಳೆ ಕಡ್ಡಾಯವಾಗಿ ಎಲ್ ಇ ಡಿ ಬಟನ್ ಬಳಸಬೇಕು
ವಾಹನಗಳ ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿ ವೇಗವಾಗಿ ಹೋಗುವ ವಾಹನ ತಡೆಯುವಂತಿಲ್ಲ