ಬೆಂಗಳೂರು ಗ್ರಾಮಾಂತರ: ಸಿಲಿಕಾನ್ ಸಿಟಿ ಹೊರಭಾಗದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಸರಗಳ್ಳತನ ಮಿತಿ ಮೀರುತ್ತಿದ್ದು, ಒಂದೇ ದಿನ 5 ಕಡೆ ಸರಗಳ್ಳತನ ನಡೆದಿದೆ. ಹೊಸಕೋಟೆಯ 28ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದೆ. ದ್ವಿ ಚಕ್ರದಲ್ಲಿ ಬಂದು ಸರಗಳ್ಳತನ ಮಾಡಿ ಖದೀಮ ಪರಾರಿಯಾಗಿದ್ದಾರೆ. ಸರಗಳ್ಳತನ ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅಂಗಡಿಗೆ ವ್ಯಾಪಾರದ ನೆಪದಲ್ಲಿ ಬಂದು ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿದ್ದ ಮಹಿಳೆಯ ಕೊರಳಲ್ಲಿನ 40 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ. ಮಹಿಳೆ ಚಿನ್ನದ ಸರ ಹಿಡಿದುಕೊಂಡ ಹಿನ್ನಲೆಯಲ್ಲಿ ಅದು ಅರ್ಧಕ್ಕೆ ಕಟ್ ಆಗಿದೆ. ಈ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರನ್ನು ಹಿಡಿಯುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.