ಲಂಚ ಪಡೆಯುವಾಗಲೇ ಎಸ್ಡಿಎ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆ ಕಾಳಗಿ ತಹಸೀಲ್ದಾರ್ ಕಚೇರಿಯಲ್ಲಿ ಎಸ್ ಡಿಎ ಆಗಿರುವ ಶರಣಪ್ಪ ಎಂಬುವವರು, ರಸ್ತೆ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ ಪ್ರಮಾಣ ಪತ್ರ ನೀಡಲು ಗುತ್ತಿಗೆದಾರ ಅಣವೀರಯ್ಯ ಎಂಬುವರ ಬಳಿ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಗುತ್ತಿಗೆದಾರನಿಂದ ನಗರದ ಖರ್ಗೆ ಸರ್ಕಲ್ನಲ್ಲಿ 1 ಲಕ್ಷ ರೂ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲೋಕಾ ಎಸ್ಪಿ ಉಮೇಶ್ ಬಿಕೆ, ಡಿವೈಎಸ್ಪಿ ಗೀತಾ ಬೆನಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.