ಬೆಂಗಳೂರು: ಆಟೋದಲ್ಲಿ ತೆರಳುತ್ತಿದ್ದ ಯುವತಿಯರಿಬ್ಬರನ್ನು ಚುಡಾಯಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇಲ್ಲಿನ ಬನಶಂಕರಿ ನಿವಾಸಿಗಳಾದ ಮುಬಾರಕ್ ಮತ್ತು ಹಫೀಫ್ ಬಂಧಿತ ಆರೋಪಿಗಳಾಗಿದ್ದು. ಏ. 23ರಂದು ಸಾರಕ್ಕಿ ಮಾರುಕಟ್ಟೆ ಬಳಿ ಬೈಕ್ ನಲ್ಲಿ ಬಂದು ಆಟೋ ಅಡ್ಡಗಟ್ಟಿ ಇಬ್ಬರು ಕಿಡಿಗೇಡಿಗಳು ಯುವತಿಯರನ್ನು ಚುಡಾಯಿಸಿದ್ದಾರೆ.
ಇದನ್ನು ಪ್ರಶ್ನಿಸಿದ್ದಕ್ಕೆ ಯುವತಿಯರ ತಾಯಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ. ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆಗೆ ಬಂದು ಯುವತಿಯರ ತಾಯಿ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ ಬಂಧಿಸಿದ್ದಾರೆ.