ಕರ್ನಾಟಕಕ್ಕೆ ಸಿದ್ದರಾಮಯ್ಯರೇ ಪೂರ್ಣಾವಧಿ ಸಿಎಂ. ಮ್ಯಾಚ್ ಕ್ಲೋಸ್ ಆಗಿದೆ, ಅಂಪೈರ್ ನಿರ್ಧಾರ ಹೊರಬಿದ್ದಿದೆ ಅಂತಾ ಸಚಿವ ಸತೀಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸತೀಶ್, ಸಿದ್ದರಾಮಯ್ಯರೇ 5 ವರ್ಷ ಸಿಎಂ, ಎಲ್ಲ ಊಹಾಪೋಹಗಳಿಗೂ ಅವರೇ ತೆರೆ ಈಗ ಎಳೆದಿದ್ದಾರೆ.
ಇನ್ನು ಸುರ್ಜೇವಾಲಾ ಮುಂದೆ 90 ಪ್ರತಿಷತ ಶಾಸಕರು ಅನುದಾನಕ್ಕೆ ಮನವಿ ಮಾಡಿದ್ದಾರೆ. ಯಾರೋ 10 ಪರ್ಸೆಂಟ್ ಮಂದಿ ಸಿಎಂ ಬದಲಿಸಿ ಎಂದಿರಬಹುದು. ಹಾಗಂತಾ ಸಿದ್ದರಾಮಯ್ಯ ಈ 90 ಪರ್ಸೆಂಟ್ ಶಾಸಕರ ಬಲದಿಂದಲೇ ಮುಖ್ಯಮಂತ್ರಿಯಾಗಿರೋದು.
ಈ ಹಿಂದೆ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದಾಗ ಯಾರು ಎಷ್ಟು ವೋಟ್ ಪಡೆದು ಸಿಎಂ ಆದ್ರು ಎಲ್ಲರಿಗೂ ಗೊತ್ತಿದೆ. ಇನ್ನು ಎಲ್ಲಾ ಗಾಳಿ ಸುದ್ದಿಗಳಿಗೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಈ ಮೂಲಕ ಆ 10 ಪರ್ಸೆಂಟ್ ಮಂದಿಗೂ ಸಂದೇಶ ರವಾನೆಯಾಗಿದೆ. ಇನ್ನು ಸಿಎಂ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡಲಾಗಿದೆ. ಹೀಗಾಗಿ ಇನ್ಮುಂದೆ ಈ ಚರ್ಚೆ ಬಿಟ್ಟು ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸೋಣ ಅಂತಾ ಸತೀಶ್ ಜಾರಿಕಿಹೊಳಿ ಸ್ಪಷ್ಪಪಡಿಸಿದ್ದಾರೆ.