ಮೇಕಪ್ ಮಾಂತ್ರಿಕ ಎಂದೇ ಖ್ಯಾತಿಯಾಗಿದ್ದ ಕಲಾವಿದ ವಿಕ್ರಮ್ ಗಾಯಕ್ವಾಡ್ (Vikram Gaikwad) ನಿಧನರಾಗಿದ್ದು, ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ.
ವಿಕ್ರಮ್ (65) ನಿಧನರಾಗಿದ್ದು, ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಿವುಡ್ ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಸಂಜು, ಪಿಕೆ, ದಂಗಲ್, ರಂಗ್ ದೆ ಬಸಂತಿ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮೇಕಪ್ ಮಾಂತ್ರಿಕನ ಸಾವಿಗೆ ಬಾಲಿವುಡ್ ತಾರೆಯರು ಕಂಬನಿ ಮಿಡಿದ್ದಾರೆ.
ವಿಕ್ರಮ್ ಗಾಯಕ್ವಾಡ್ ನಿಧನದ ಸುದ್ದಿಯನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಖಚಿತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
‘ವಿಕ್ರಮ್ ಗಾಯಕ್ವಾಡ್ ಕಲಾಕಾರ ಆಗಿದ್ದರು. ಅವರ ಕೆಲಸದಿಂದಾಗಿ ಅನೇಕ ಕಲಾವಿದರು ಮರೆಯಲಾದ ಪಾತ್ರಗಳಾಗಿ ಕಾಣಿಸಿಕೊಂಡರು. ವಿಕ್ರಮ್ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ ದಾದ’ ಎಂದು ಆಮಿರ್ ಖಾನ್ ಅವರು ಹೇಳಿದ್ದಾರೆ.