ಹಾವೇರಿ : ಹಾವೇರಿ ತಾಲೂಕಿನ ಕೂರ್ಗುಂದ ಎಂಬಲ್ಲಿ ಹಲವಾರು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನ್ ಗೆ ಬಿದ್ದಿದೆ.
ಕೆಲ ದಿನಗಳಿಂದ ವಿಪರೀತವಾಗಿದ್ದ ಚಿರತೆ ಹಾವಳಿಗೆ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ನಿರಂತರವಾಗಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.