ಇರಾನ್-ಇಸ್ರೇಲ್ ನಡುವಿನ ಕದನ ಘನಘೋರ ಹಂತ ತಲುಪಿದೆ.
ನಿನ್ನೆ ಒಂದೇ ದಿನ ಇರಾನ್, ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ.
ಪರಿಣಾಮ ಇಸ್ರೇಲ್ ನ ಐವರು ಬಲಿಯಾಗಿದ್ದಾರೆ. ಇಸ್ರೇಲ್ ನ ಪ್ರಮುಖ ನಗರಿ ಟೆಲ್ ಅವೀವ್ ಮೇಲೆ ನಿರಂತರ ಕ್ಷಿಪಣಿ ದಾಳಿ ನಡೆಸಲಾಗಿದೆ. ಪರಿಣಾಮ ಅಮೆರಿಕನ್ ಕೌನ್ಸಿಲೇಟ್ ಕಚೇರಿಯೂ ಛಿದ್ರವಾಗಿದೆ. ನೂರಾರು ಮಂದಿ ಇಸ್ರೇಲಿಗಳು ಗಾಯಗೊಂಡಿದ್ದಾರೆ.
ಅಷ್ಟೇ ಅಲ್ಲಾ ಇಸ್ರೇಲ್ ನ ಹೈಫಾದ ತೈಲ ಸಂಸ್ಕಣರಾಗಾರದ ಮೇಲೂ ದಾಳಿ ಮಾಡಲಾಗಿದೆ. ಇದಕ್ಕುತ್ತರವಾಗಿ ಇಸ್ರೇಲ್ ಕೂಡಾ ತನ್ನ ಪ್ರತಿದಾಳಿಯನ್ನು ಮುಂದುವರಿಸಿದೆ. ಇರಾನ್ ಸರ್ಕಾರಿ ಟಿವಿ ಐಆರ್ ಐಬಿ ಕಚೇರಿ ಮೇಲೂ ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ವೇಳೆ ನ್ಯೂಸ್ ಓದುತ್ತಾ ಇರಾನ್ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದ ನಿರೂಪಕಿ ಎದ್ನೋ ಬಿದ್ನೋ ಅಂತಾ ನಿರೂಪಣೆ ಅರ್ಧಕ್ಕೆ ಬಿಟ್ಟು ಓಡಿದ ಪ್ರಸಂಗ ನಡೆದಿದೆ.