ಆರ್ ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಂಡ್ಯದ ಯುವಕ ಪೂರ್ಣಚಂದ್ರ ಸಾವನ್ನಪ್ಪಿದ್ದು, ತಂದೆ- ತಾಯಿ ಇನ್ನೂ ಗೋಳಾಡುತ್ತಿದ್ದಾರೆ. ಮಗನ ಸಮಾಧಿ ಬಳಿ ತಂದೆ ಕೊರಗುತ್ತ, ಅಳುತ್ತ ಕುಳಿತಿದ್ದಾರೆ.
ಮೃತ ಯುವಕ ಪೂರ್ಣಚಂದ್ರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಶೋಕದ ಮಡುವಿನಲ್ಲಿ ಯುವಕನ ಕುಟುಂಬ ಕೊಚ್ಚಿ ಹೋಗುತ್ತಿದೆ. ಮೃತ ಮಗನನ್ನು ನೆನೆದು ತಂದೆ- ತಾಯಿ ಕಣ್ಣೀರು ಸುರಿಸುತ್ತಿದ್ದಾರೆ. ಮಗನ ಸಾವಿಗೆ ಸರ್ಕಾರವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.